ರಾಷ್ಟ್ರೀಯ ನೇತ್ರದಾನ ಪಾಕ್ಷಿಕ, ಜನಜಾಗೃತಿಗಾಗಿ ವಾಕಥಾನ್

IMG_20240906_210729_552.jpg
Published on

ಹುಬ್ಬಳ್ಳಿ: ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆಯ ಅಂಗವಾಗಿ ಹುಬ್ಬಳ್ಳಿಯ ಕೋ-ಆಪರೇಟಿವ್ ಆಸ್ಪತ್ರೆ, ಕೆಎಲ್ಇ ಮೆಡಿಕಲ್ ಕಾಲೇಜು ಮತ್ತು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಸಹಯೋಗದೊಂದಿಗೆ ಶುಕ್ರವಾರ ವಾಕಥಾನ್ ಏರ್ಪಡಿಸಲಾಗಿತ್ತು.

ನಗರದ ಕೋ-ಆಪರೇಟಿವ್ ಆಸ್ಪತ್ರೆಯಿಂದ ವಾಕಥಾನ್ ಆರಂಭಿಸಿ ಸ್ಟೇಷನ್ ರಸ್ತೆ ಮಾರ್ಗವಾಗಿ ಸಂಚರಿಸಿ ನೇತ್ರದಾನ ಜಾಗೃತಿ ಮೂಡಿಸಲಾಯಿತು. ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು.

ಕೋ- ಆಪರೇಟಿವ್ ಆಸ್ಪತ್ರೆಯ ಗೌರವ ಕಾರ್ಯದರ್ಶಿ ಲಿಂಗರಾಜ ಪಾಟೀಲ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವಿಣ ಭನ್ಸಾಲಿ, ಕೌಸ್ತುಭ ಸಂಶೀಕರ, ಸುಮೇರ್ ಓಸ್ವಾಲ್, ಆಸ್ಪತ್ರೆಯ ಡಾ. ವೈ.ಜಿ. ಹಂಜಿ, ಡಾ. ಮೇನಾ ಪಾಟೀಲ, ಡಾ. ಶಿಲ್ಪಾ ಬಳಿಗಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net