

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಆಟೋ ಸ್ಟ್ಯಾಂಡ್ ಬಳಿಯ ಶ್ರೀ ಮಹಾಲಕ್ಷ್ಮಿದೇವಿ ದೇವಸ್ಥಾನದಲ್ಲಿ ಜುಲೈ 22ರಂದು ಜಾತ್ರಾ ಉತ್ಸವ ಏರ್ಪಡಿಸಲಾಗಿದೆ.
ಬೆಳಗ್ಗೆ 6ಕ್ಕೆ ಹೋಮ ನಂತರ ಶ್ರೀದೇವಿಯ ಪಲ್ಲಕ್ಕಿ ಉತ್ಸವ ವಿವಿಧೆಡೆ ಸಂಚರಿಸಲಿದೆ. ಮಧ್ಯಾಹ್ನ 12.30ಕ್ಕೆ ಅನ್ನಪ್ರಸಾದ ಸೇವೆ ನಡೆಯಲಿದೆ.
ಸುತ್ತಮುತ್ತಲಿನ ಸಾರ್ವಜನಿಕರು ಮಹಾಪೂಜೆಗೆ ಆಗಮಿಸಿ ಪ್ರಸಾದ ಸ್ವೀಕರಿಸಬೇಕೆಂದು ಕರ್ನಾಟಕ ಕನ್ನಡ ಸಂಘದ ಅಧ್ಯಕ್ಷ ಶ್ರೀಪಾದ ಹುಯಿಲಗೋಳ, ಆಟೋ ಸ್ಟಾಂಡ್ ಅಧ್ಯಕ್ಷ ಸುಭಾಸ್ ಹುಬ್ಬಳ್ಳಿ, ಸಿದ್ದು ಸುಣ್ಣದಪುಡಿ ಇತರರು ಕೋರಿದ್ದಾರೆ.