ಮದ್ಯ ಸಿಗದೆ ಸ್ಯಾನಿಟೈಸರ್​ ಕುಡಿದಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು

Man Death
Published on

ಹುಬ್ಬಳ್ಳಿ: ಲಾಕ್​ಡೌನ್​ನಿಂದ ಮದ್ಯ ಸಿಗದೆ ಸ್ಯಾನಿಟೈಸರ್​ ಕುಡಿದಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.

ಬಸವರಾಜ ವೆಂಕಪ್ಪ ಕುರುವಿನಕೊಪ್ಪ (45 ವರ್ಷ) ಮೃತ ವ್ಯಕ್ತಿ. ಕಲಘಟಗಿ ತಾಲ್ಲೂಕಿನ ಗಂಬ್ಯಾಪುರ ನಿವಾಸಿಯಾಗಿದ್ದ ಬಸವರಾಜ ಮದ್ಯದ ದಾಸನಾಗಿದ್ದ. ಮಹಾಮಾರಿ ಕರೊನಾ ವೈರಸ್​ ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್​ಡೌನ್​ ಹೇರಿರುವುದರಿಂದ ಎಲ್ಲಿಯೂ ಮದ್ಯ ಸಿಗದೆ ಪರದಾಡಿದ್ದ ಆತ ಸ್ಯಾನಿಟೈಸರ್​ ಕುಡಿದಿದ್ದ.

ಮೂರು ದಿನಗಳ ಹಿಂದೆಯೇ ಸ್ಯಾನಿಟೈಸರ್​ ಕುಡಿದು ಅಸ್ವಸ್ಥಗೊಂಡಿದ್ದ ಆತನನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವಿಗೀಡಾಗಿದ್ದಾರೆ. ಅಲ್ಲದೆ, ಹುಬ್ಬಳ್ಳಿಯಲ್ಲಿ ಹಲವರು ಮದ್ಯ ಸಿಗದ ಕಾರಣ ಸ್ಯಾನಿಟೈಸರ್​ ಮೊರೆ ಹೋಗಿದ್ದಾರೆಂಬ ವಿಷಯವು ಬಹಿರಂಗವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net