ಹುಬ್ಬಳ್ಳಿ ಕಾ ರಾಜಾ, ಸ್ಟೇಶನ್ ರಸ್ತೆ ಅಲಂಕಾರ ಪ್ರಥಮ, ಅಷ್ಟವಿನಾಯಕ ಸ್ಪರ್ಧೆಗೆ ಅಭೂತಪೂರ್ವ ಬೆಂಬಲ

IMG-20240916-WA0008-1.jpg
Published on

ಹುಬ್ಬಳ್ಳಿ; ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಏರ್ಪಡಿಸಿದ್ದ ಅಷ್ಟವಿನಾಯಕ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭಕ್ಕೆ ಹುಬ್ಬಳ್ಳಿ ಧಾರವಾಡ ಅವಳಿನಗರದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.

ಸ್ಪರ್ಧೆಗೆ ನೋಂದಣಿ ಮಾಡಿಕೊಂಡಿದ್ದ ಬಹುತೇಕ ಸಮಿತಿಯವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅದ್ದೂರಿ ಕಾರ್ಯಕ್ರಮಕ್ಕೆ ಸಾಯಾದರು. ಪ್ರತಿ ವರ್ಷದಂತೆ ಸ್ಪರ್ಧೆಗೆ ನೋಂದಣಿ ಮಾಡಿಕೊಂಡಿದ್ದ ಸುಮಾರು 85 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಂಟಪಗಳಿಗೆ ನಿರ್ಣಾಯಕರು ತೆರಳಿ ಸಮಗ್ರ ಅವಲೋಕನ ಮಾಡಿ ಉತ್ತಮ ವಿಗ್ರಹ, ಉತ್ತಮ ಅಲಂಕಾರ ವಿಭಾಗದಲ್ಲಿ ತಲಾ 13 ಬಹುಮಾನ ಸೇರಿ ಒಟ್ಟು 26 ಬಹುಮಾನಗಳಿಗೆ ಆಯ್ಕೆ ಮಾಡಿದ್ದರು.

ಅತ್ಯಂತ ಪಾರದರ್ಶಕವಾಗಿ ನಿರ್ಣಾಯಕರು ಗಣೇಶೋತ್ಸವ ಸಮಿತಿಗಳನ್ನು ಆಯ್ಕೆ ಮಾಡಿದ್ದರು. ವಿಜೇತ ಎಲ್ಲ ಸಮಿತಿಗಳಿಗೆ ಇಲ್ಲಿಯ ದೇಶಪಾಂಡೆನಗರ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಅದ್ದೂರಿ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

ಸಮಿತಿಯವರು ಉತ್ಸಾಹದಿಂದ ಆಗಮಿಸಿ ತಮ್ಮ ಹೆಸರು ಕರೆಯುತ್ತಿದ್ದಂತೆ ಜಯಘೋಷ ಮೊಳಗಿಸುತ್ತ ಬಹುಮಾನ ಪಡೆದುಕೊಂಡರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಶ್ರೀ ವಿಘ್ನೇಶ್ವರನ ಜಯಘೋಷಗಳು ಕಾರ್ಯಕ್ರಮದುದ್ದಕ್ಕೂ ಮೊಳಗಿದವು.

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಪದಾಧಿಕಾರಿಗಳಾದ ಅಲ್ತಾಫ್ ಕಿತ್ತೂರ, ಅಮರೇಶ ಹಿಪ್ಪರಗಿ, ಎಸ್.ಎಸ್.. ಕಮಡೋಳ್ಳಿಶೆಟ್ರು, ಗಣ್ಯರಾದ ಸಂತೋಷ ಕಾಟವೆ, ಸಚೀನ ಕಂಗಳೆಕರ, ಸಂತೋಷ ಕಟ್ಟಿ, ಶ್ರೀನಿವಾಸ ಬೋಚಗೇರಿ, ಗಾಯತ್ರಿ ನೆಲ್ಲಿಕೊಪ್ಪ, ಸಾಧನಾ ಪೂಜಾರ, ರೇಖಾ ಆಪ್ಟೆ, ವಿಜಯಲಕ್ಷ್ಮಿ ಏಕಬೋಟೆ, ಪುಷ್ಪಾ ಹಿತ್ತಾಳಿ, ಲಕ್ಷ್ಮಿ ಮಗಜಿಕೊಂಡಿ, ಮಂಜುಳಾ ಹತ್ತಿಮತ್ತೂರ, ಸಂಗೀತಾ ದೇವದಾಸ, ಇನ್ನರ್ವ್ಹೀಲ್ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಸ್ವಾಗತಿಸಿದರು. ಮುಖ್ಯ ಉಪಸಂಪಾದಕ ಜಿ.ಟಿ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸೃಷ್ಟಿ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು.

ಬಹುಮಾನ ವಿಜೇತ ಸಮಿತಿಗಳು: ಉತ್ತಮ ವಿಗ್ರಹ ವಿಭಾಗ& ಹುಬ್ಬಳ್ಳಿ ಕಾ ರಾಜಾ, ದಾಜಿಬಾನ ಪೇಟೆ& ಪ್ರಥಮ, ಶ್ರೀಮಾರುತಿ ಯುವಕ ಮಂಡಳ, ಕೋಳಿಕೇರಿ, ಧಾರವಾಡ& ದ್ವೀತಿಯ, ಶ್ರೀ ಗಜಾನನ ಉತ್ಸವ ಸಮಿತಿ, ಬಾರದಾನ ಸಾಲ, ಹುಬ್ಬಳ್ಳಿ& ತೃತೀಯ ಬಹುಮಾನ ಪಡೆದರು.

ಸಮಾಧಾನಕರ ಬಹುಮಾನಗಳು
ಶ್ರೀ ಗಣೇಶ ಉತ್ಸವ ಸಮಿತಿ ಮರಾಠಾ ಗಲ್ಲಿ, ಹುಬ್ಬಳ್ಳಿ, ಶ್ರೀ ಸಪ್ತ ಸಾಮ್ರಾಟ ಗಜಾನನ ಯುವಕ ಮಂಡಳ ನ್ಯೂ ಮ್ಯಾದಾರ ಓಣಿ, ಹುಬ್ಬಳ್ಳಿ, ಶ್ರೀ ವೀರಮಾರುತಿ ಯುವಕ ಮಂಡಳ ಮಾರುತಿ ಗುಡಿ, ಹೊಸೂರ ಹುಬ್ಬಳ್ಳಿ, ಮಡಿವಾಳ ನಗರ ಯುವಕ ಮಂಡಳಿ ಹಿಂದು ಮಹಾಗಣಪತಿ ಮಡಿವಾಳ ನಗರ, ಹುಬ್ಬಳ್ಳಿ, ಶ್ರೀ ಗಜಾನನ ಉತ್ಸವ ಸಮಿತಿ ವಿಕ್ಟೋರಿಯಾ ರೋಡ್ ಸಾಲ ಓಣಿ, ಹುಬ್ಬಳ್ಳಿ, ಶ್ರೀ ಗಜಾನನ ಯುವಕ ಮಂಡಳ ಕಮಲಾಪುರ ಅಗಸಿ, ಧಾರವಾಡ, ಶ್ರೀ ಗಜಾನನ ಉತ್ಸವ ಸಮಿತಿ ಗಾಂಧಿಚೌಕ್ ಧಾರವಾಡ, ಶ್ರೀ ಗಜಾನನ ಉತ್ಸವ ಸಮಿತಿ ಸೂಪರ್ ಮಾರ್ಕೆಟ್, ಧಾರವಾಡ, ಶ್ರೀ ಸೈದಾಪುರ ಗಣೇಶೋತ್ಸವ ಸಮಿತಿ ಗೌಡರ ಓಣಿ, ಧಾರವಾಡ, ಶ್ರೀಗಜಾನನ ಯುವಕ ಮಂಡಳ ಹೊಸಯಲ್ಲಾಪುರ ರಾಮನಗರ, ಧಾರವಾಡ.

ಉತ್ತಮ ಅಲಂಕಾರ ವಿಭಾಗ: ಶ್ರೀಗಣೇಶೋತ್ಸವ ಮಂಡಳಿ ಚಂದ್ರಕಲಾ ಟಾಕೀಸ್ ಸ್ಟೇಶನ್ ರಸ್ತೆ, ಹುಬ್ಬಳ್ಳಿ& ಪ್ರಥಮ, ಶ್ರೀಗಣೇಶ ಉತ್ಸವ ಮಂಡಳಿ ಹಿರೇಪೇಟ ಹುಬ್ಬಳ್ಳಿ& ದ್ವೀತಿಯ ಹಾಗೂ ಶ್ರೀ ಚಿನ್ನಮಾರುತಿ ಗಜಾನನ ಉತ್ಸವ ಸಮಿತಿ ಹಳೇ ತಾಲೂಕು ಕಚೇರಿ, ಧಾರವಾಡ& ತೃತೀಯ ಬಹುಮಾನ ಪಡೆದರು.

ಸಮಾಧಾನಕರ ಬಹುಮಾನ: ಶ್ರೀ ಬಾಲ ಗಜಾನನ ಯುವಕ ಮಂಡಳ ಹಿಪ್ಪರಗಿ ಬಿಲ್ಡಿಂಗ್ ಹತ್ತಿರ, ವಿದ್ಯಾನಗರ, ಹುಬ್ಬಳ್ಳಿ, ಸರಾ್ ಗಟ್ಟಿ ಗಜಾನನೋತ್ಸವ ಸಮಿತಿ ಸರಾ ಗಟ್ಟಿ, ಹುಬ್ಬಳ್ಳಿ, ಗಜಪಡೆ ಯುವ ಬಳಗ ಗಣೇಶ ಗುಡಿ ಹತ್ತಿರ ಈಶ್ವರನಗರ ನವನಗರ ಹುಬ್ಬಳ್ಳಿ, ಶ್ರೀಗಜಾನನ ಯುವಕ ಮಂಡಳ ಮಂಗಳವಾರ ಪೇಟ, ಹುಬ್ಬಳ್ಳಿ, ಶ್ರೀ ಗಜಾನನ ಯುವಕ ಮಂಡಳ ಡಾರ್ಲಸ್ ಕಾಲನಿ, ಹುಬ್ಬಳ್ಳಿ, ಶ್ರೀಗಜಾನನ ಉತ್ಸವ ಸಮಿತಿ ಕಮಡೊಳ್ಳಿ ಓಣಿ ಕುಬಸದ ಗಲ್ಲಿ, ಹುಬ್ಬಳ್ಳಿ, ಶ್ರೀಗಜಾನನ ಉತ್ಸವ ಸಮಿತಿ ಜೈಭಾರತ ಸರ್ಕಲ್ ಕಮರಿಪೇಟ ಹುಬ್ಬಳ್ಳಿ, ಶ್ರೀ ಏಕದಂತ ಅಭಿವೃದ್ಧಿ ಯುವಕ ಮಂಡಳ ರಾಜನಗರ, ಧಾರವಾಡ, ಶ್ರೀ ವಿನಾಯಕ ಉತ್ಸವ ಮಂಡಳಿ ದುರ್ಗಾದೇವಿ ದೇವಸ್ಥಾನ, ಧಾರವಾಡ ಹಾಗೂ ವರಸಿದ್ಧಿ ವಿನಾಯಕ ಮಂಡಳ ಶೀಲವಂತರ ಓಣಿ, ಹುಬ್ಬಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net