ಹುಬ್ಬಳ್ಳಿಯ ಜೆಎಸ್‌ಎಸ್ ಸೆಂಟ್ರಲ್ ಸ್ಕೂಲ್ ರನ್ನರ್ ಅಪ್

24 Dwd 1
Published on

ಧಾರವಾಡ: ಹುಬ್ಬಳ್ಳಿ ಧಾರವಾಡ ಉತ್ತರ ಕರ್ನಾಟಕ ಸಹೋದಯ ಕ್ರೀಡಾಕೂಟದ 17 ವರ್ಷದೊಳಗಿನ ಸ್ಪರ್ಧೆಗಳಲ್ಲಿ ಹುಬ್ಬಳ್ಳಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾರೆ.
800 ಮೀ. ಬಾಲಕಿಯರ ವಿಭಾಗದಲ್ಲಿ ವೈಷ್ಣವಿ ಕಶ್ಯಪ್ ಪ್ರಥಮ, ಸ್ತುತಿ ಬುಳ್ಳನವರ ತೃತೀಯ, 400 ಮೀ. ಬಾಲಕಿಯರ ಓಟದಲ್ಲಿ ಸಂಯುಕ್ತಾ ಯೋಗಿ ಪ್ರಥಮ, 100 ಮೀ. ಬಾಲಕಿಯರ ವಿಭಾಗದಲ್ಲಿ ಅರೈನಾ ಕುರುಂದವಾಡೆ ಪ್ರಥಮ, 200 ಮೀ. ಬಾಲಕಿಯರ ವಿಭಾಗದಲ್ಲಿ ಗುಂಜನ ಅಂಗಡಿ ಪ್ರಥಮ ಸ್ಥಾನ ಮತ್ತು 4*100 ಮಿಶ್ರ ರಿಲೆಯಲ್ಲಿ ಶಾಲೆ ದ್ವಿತೀಯ ಸ್ಥಾನ ಪಡೆದಿದೆ.
ವಿದ್ಯಾರ್ಥಿಗಳ ಸಾಧನೆಯನ್ನು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಅಭಿನಂದಿಸಿದ್ದಾರೆ. ಪ್ರಾಚಾರ್ಯೆ ರಜನಿ ಪಾಟೀಲ, ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ಜಿ.ಎಂ. ಮಂಗಳೂರು, ವಿ.ಕೆ. ಭರಣಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net