ಹುಬ್ಬಳ್ಳಿ ಜಗ್ಗಲಗಿ ಹಬ್ಬ 28ರಂದು

h12-jaggalagi
Published on

ಹುಬ್ಬಳ್ಳಿ: ನಗರದ ಮೂರುಸಾವಿರ ಮಠದಲ್ಲಿ ಮಂಗಳವಾರ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು.
ಆಯೋಜಕ, ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಮಾ. 28ರಂದು ಮಧ್ಯಾಹ್ನ 3ಕ್ಕೆ ಮೂರುಸಾವಿರ ಮಠದ ಆವರಣದಲ್ಲಿ ಜಗ್ಗಲಗಿ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು ಹಬ್ಬಕ್ಕೆ ಚಾಲನೆ ನೀಡುವರು. ಕಳೆದ 11 ವರ್ಷಗಳಿಂದ ಜಗ್ಗಲಗಿ ಹಬ್ಬ ಆಚರಿಸಲಾಗುತ್ತಿದೆ. ಮೂರುಸಾವಿರ ಮಠದಿಂದ ಆರಂಭಿಸಿದ ಹಬ್ಬವು ಈಗ ನೆರೆ ರಾಜ್ಯ, ರಾಜ್ಯದ ಗಮನ ಸೆಳೆದಿದೆ ಎಂದರು.
ಮಹಾನಗರ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ್, ಸುಭಾಷಸಿಂಗ್ ಜಮಾದಾರ, ಮಹೇಂದ್ರ ಕೌತಾಳ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ದತ್ತಮೂರ್ತಿ ಕುಲಕರ್ಣಿ, ಶಿವು ಮೆಣಸಿನಕಾಯಿ, ಉಮಾ ಮುಕುಂದ, ರೂಪಾ ಶೆಟ್ಟಿ, ಅನುರಾಧ ಚಿಲ್ಲಾಳ ಇತರರು ಮಾತನಾಡಿದರು.
ಸಮಿತಿಯ ಜಗದೀಶ ಬುಳ್ಳಾನವರ, ಅಶೋಕ ವಾಲ್ಮೀಕಿ, ರವಿ ನಾಯಕ, ಮೋಹನಲಾಲ್ ಜೈನ್, ಪ್ರಕಾಶ ಬಾಫಣಾ, ಗೋಪಾಲ ಬದ್ದಿ, ಕೃಷ್ಣ ಗಂಡಗಾಳೇಕರ, ಪ್ರಶಾಂತ ಜಾಧವ, ಪ್ರಕಾಶ ಶೃಂಗೇರಿ, ಪ್ರಕಾಶ ಬುರಬುರೆ, ಭಾಸ್ಕರ ಜಿತೂರಿ, ರಾಜು ಕಾಳೆ, ಬೀರಪ್ಪ ಖಂಡೇಕರ, ಬಸವರಾಜ ಅಮ್ಮಿನಭಾವಿ, ವಿನೋದ ರೇವಣಕರ, ಪ್ರಶಾಂತ ಹಾವಣಗಿ, ಟಿ.ಎನ್. ಶಿವನಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net