

ಹುಬ್ಬಳ್ಳಿ: ವಿಆರ್‌ಎಲ್ ಲಾಜಿಸ್ಟಿಕ್ಸ್ ಪ್ರೈ.ಲಿ. ಸಹಯೋಗದಲ್ಲಿ ಹುಬ್ಬಳ್ಳಿ ಫಿಟ್‌ನೆಸ್ ಫೌಂಡೇಷನ್ ವತಿಯಿಂದ 10ನೇ ಆವೃತ್ತಿಯ ಹುಬ್ಬಳ್ಳಿ ಹಾಫ್ ಮ್ಯಾರಾಥಾನ್, ಇಲ್ಲಿಯ ಗೋಕುಲ ರಸ್ತೆಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ನ. 17ರಂದು ಬೆಳಗ್ಗೆ 5.30ಕ್ಕೆ ಏರ್ಪಾಟಾಗಿದೆ.
ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವಾ ಸಂಕೇಶ್ವರ, ಕೆಎಲ್‌ಇ ಐಟಿ ಪ್ರಾಚಾರ್ಯ ಡಾ. ಮನು ಟಿ.ಎಂ., ದೇಶಪಾಂಡೆ ಫೌಂಡೇಷನ್ ಸ್ಕಿಲ್ ಡೆವೆಲಪ್‌ಮೆಂಟ್‌ನ ಸಿಇಒ ಪಿ.ಎನ್. ನಾಯಕ, ಅಳಗುಂಡಗಿ ಇಂಡಸ್ಟ್ರೀಸ್ ಮಾಲೀಕರಾದ ಜಯಕುಮಾರ ಅಳಗುಂಡಗಿ, ಶ್ವೇತಾ ಅಳಗುಂಡಗಿ, ಪ್ರಮುಖರಾದ ಡಾ. ಅರುಣ ಯಳಮಲಿ, ಡಾ.ಎಸ್.ಪಿ. ಬಳಿಗಾರ, ಡಾ. ಮಹೇಶಕುಮಾರ ಶಂಕರ, ಡಾ. ಜಿ.ಸಿ. ಪಾಟೀಲ, ಹುಬ್ಬಳ್ಳಿ ಫಿಟ್‌ನೆಸ್ ಫೌಂಡೇಷನ್ ತಂಡದ ಸದಸ್ಯರು ಭಾಗವಹಿಸಲಿದ್ದಾರೆ.
5ಕಿ.ಮೀ., 10ಕಿ.ಮೀ., 15 ಕಿ.ಮೀ. ಹಾಗೂ 21 ಕಿ.ಮೀ. ಓಟ ನಡೆಯಲಿದೆ. ಕಳೆದ ಬಾರಿ ಸುಮಾರು 5 ಸಾವಿರ ಜನರು ಭಾಗವಹಿಸಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ 3ಸಾವಿರಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿದ್ದು, ಬಿಬ್ ವಿತರಿಸಲಾಗಿದೆ. ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಗೆದ್ದವರಿಗೆ ಈ ಬಾರಿ 7.30 ಲಕ್ಷ ರೂ.ವರೆಗೆ ನಗದು ಬಹುಮಾನ ಕೊಡಲು ತೀರ್ಮಾನಿಸಲಾಗಿದೆ. ಕಾಲೇಜ್ ಆವರಣದಿಂದ ವಿಮಾನ ನಿಲ್ದಾಣ ಮಾರ್ಗವಾಗಿ ಗಾಮನಗಟ್ಟೆ ವರೆಗೆ ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ. ದಾರಿಯುದ್ದಕ್ಕೂ ಆಂಬುಲೆನ್ಸ್, ಶೌಚಾಗೃಹ, ನೀರಿನ ಅರವಟಿಗೆ ಅಳವಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.