ಹುಬ್ಬಳ್ಳಿ ಹಾಫ್ ಮ್ಯಾರಾಥಾನ್ ನ. 17ರಂದು

h28-marathon LOGO
Published on

ಹುಬ್ಬಳ್ಳಿ: ಫಿಟ್‌ನೆಸ್ ಕ್ಲಬ್ ವತಿಯಿಂದ 10ನೇ ಆವೃತ್ತಿಯ ಹುಬ್ಬಳ್ಳಿ ಹಾಫ್ ಮ್ಯಾರಾಥಾನ್ ನ. 17ರಂದು ಏರ್ಪಾಟಾಗಿದೆ. ಕಳೆದ ಬಾರಿ ಸುಮಾರು 5 ಸಾವಿರ ಜನರು ಭಾಗವಹಿಸಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಪ್ರಯುಕ್ತ ಆನ್‌ಲೈನ್ ರಿಜಿಸ್ಟ್ರೇಷನ್ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಈ ಬಾರಿ 7.30 ಲಕ್ಷ ರೂ.ವರೆಗೆ ನಗದು ಬಹುಮಾನ ಕೊಡುವುದಾಗಿ ಸಂಯೋಜಕ ಡಾ. ಅರುಣ ಯಳಮಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net