ಹುಬ್ಬಳ್ಳಿ-ಗುಂತಕಲ್ ಡೆಮೊ ರೈಲು ಸಂಚಾರ ಆರಂಭ: ಹೊಸಪೇಟೆಗೆ ಆಗಮಿಸಿದ ರೈಲಿಗೆ ಅದ್ದೂರಿ ಸ್ವಾಗತ

161221 Hubli to Gundkal Train Demo
ಹುಬ್ಬಳ್ಳಿ-ಗುಂತಕಲ್ ಡೆಮೊ ರೈಲನ್ನು ಹೊಸಪೇಟೆ ನಿಲ್ದಾಣದಲ್ಲಿ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಸದಸ್ಯರು ಬುಧವಾರ ಸ್ವಾಗತಿಸಿದರು.
Published on

ಹೊಸಪೇಟೆ: ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಿಭಾಗದಿಂದ ಆರಂಭಿಸಲಾದ ಹುಬ್ಬಳ್ಳಿ-ಹೊಸಪೇಟೆ-ಗುಂತಕಲ್ ಡೆಮೊ ರೈಲು (ಗಾಡಿ ಸಂಖ್ಯೆ: 07337/07338) ಸಂಚಾರ ಬುಧವಾರ ಆರಂಭವಾಗಿದ್ದು, ನಗರದಲ್ಲಿ ರೈಲ್ವೆ ಅಭಿವೃದ್ಧಿ ಕ್ರಿಯಾಸಮಿತಿ ಸದಸ್ಯರು ಸ್ವಾಗತಿಸಿದರು.

ಈ ಹಿಂದೆ ಸಂಚರಿಸುತ್ತಿದ್ದ ಹುಬ್ಬಳ್ಳಿ-ಗುಂತಕಲ್ ಪ್ಯಾಸೆಂಜರ್ ಗಾಡಿಯನ್ನು ಡೆಮೊ ಗಾಡಿಯನ್ನಾಗಿ ಪರಿವರ್ತಿಸಿ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಈ ರೈಲು ಪ್ರತಿದಿನ ಬೆಳಗ್ಗೆ ಹುಬ್ಬಳಿಯಿಂದ 7.40ಕ್ಕೆ ಹೊರಟು, 10.45ಕ್ಕೆ ಹೊಸಪೇಟೆಗೆ ಆಗಮಿಸಿ ಮಧ್ಯಾಹ್ನ 2.10ಕ್ಕೆ ಗುಂತಕಲ್ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 2.40ಕ್ಕೆ ಹೊರಟು, ಸಂಜೆ 5.15ಕ್ಕೆ ಹೊಸಪೇಟೆಗೆ ಆಗಮಿಸಿ, ರಾತ್ರಿ 9.10ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಡೆಮೊ ರೈಲು ಇತರ ಸಾಂಪ್ರದಾಯಿಕ ಗಾಡಿಗಳಿಗಿಂತ ವಿಭಿನ್ನವಾಗಿದ್ದು, ಮಹಾನಗರಗಳಲ್ಲಿ ಸಂಚರಿಸುವ ಮೆಟ್ರೋ ರೈಲಿನ ವಿನ್ಯಾಸ ಹೊಂದಿದೆ. ಕೋಚ್‌ಗಳಲ್ಲಿ ವಿಶಾಲ ಸ್ಥಳವಿದ್ದು, ಹೆಚ್ಚಿನ ಆಸನಗಳನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net