ಅಯ್ಯೋ ಪ್ರಾಬ್ಲಂ, ಹುಬ್ಬಳ್ಳಿ ಗುಡಿ ಪ್ಲಾಟ್ ರಸ್ತೆ ಅವ್ಯವಸ್ಥೆ

h6- Gudi plot road 1
Published on

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿ ಸ್ಮಶಾನ ಹತ್ತಿರದ ಗುಡಿ ಪ್ಲಾಟ್ ಬಸವ ನಗರದಲ್ಲಿ ರಸ್ತೆಗಳು ಇಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಪಕ್ಕಾ ರಸ್ತೆ ಇಲ್ಲ, ಮಣ್ಣಿನ ರಸ್ತೆಗಳು ಮಳೆಯಾದರೆ ಓಡಾಡಲು ಬರುವುದಿಲ್ಲ. ವಾಹನಗಳು ಸಿಕ್ಕಿಹಾಕಿಕೊಳ್ಳುತ್ತವೆ. ಪಾದಚಾರಿಗಳು ಕೆಸರಿನಲ್ಲಿ ನಡೆದುಕೊಂಡು ಹೋಗಬೇಕು.

ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಪತ್ರ ಬರೆಯಲಾಗಿದೆ. ರಸ್ತೆ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಗುಡಿ ಪ್ಲಾಟ್ ಹಾಗೂ ಬಸವನಗರ ಗಾರ್ಡನ್ ಹತ್ತಿರ ಒಂದಿಷ್ಟು ಖಡಿ ಹಾಕಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

- ಎಸ್.ಸಿ. ಕಮ್ಮಾರ, ಗುಡಿ ಪ್ಲಾಟ್ ಅಧ್ಯಕ್ಷರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net