ಸರ್ಕಾರಿ ನೌಕರಿ, ಸೈಟ್ ಕೊಡಿಸುವುದಾಗಿ 72 ಲಕ್ಷ ರೂ. ಮೋಸ ಮಾಡಿದ ಹುಬ್ಬಳ್ಳಿವಾ

Crime Logo
Published on

ರಾಣೆಬೆನ್ನೂರ: ಇಲ್ಲಿಯ ನಿವಾಸಿಯೊಬ್ಬರಿಗೆ ತಮ್ಮ ಮಗನಿಗೆ ಸರ್ಕಾರಿ ನೌಕರಿ ಹಾಗೂ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಸೈಟ್ ಕೊಡುವುದಾಗಿ ಹೇಳಿದ ಹುಬ್ಬಳ್ಳಿಯ ವ್ಯಕ್ತಿಯೊಬ್ಬ 72 ಲಕ್ಷ ರೂ. ತೆಗೆದುಕೊಂಡು ಮೋಸ ಮಾಡಿದ ಕುರಿತು ನಗರದ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹುಬ್ಬಳ್ಳಿಯ ಮೃತ್ಯುಂಜಯ ಚಂದ್ರಶೇಖರಯ್ಯ ಬೂದಿಹಾಳಮಠ ಮೋಸ ಮಾಡಿದ ಆರೋಪಿ.
ಇಲ್ಲಿಯ ರಾಜೇಶ್ವರಿ ನಗರದ ಚಂದ್ರಶೇಖರ ಪಾಟೀಲ ಮೋಸ ಹೋಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಮೃತ್ಯುಂಜಯ ನನಗೆ ಸರ್ಕಾರದಲ್ಲಿ ಬಹಳಷ್ಟು ಅಧಿಕಾರಿಗಳು ಪರಿಚಯವಿದೆ. ನಿಮ್ಮ ಮಗನಿಗೆ ನೌಕರಿ ಕೊಡಿಸುತ್ತೇನೆ. ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಸಹ ಮಾಡುತ್ತಿದ್ದು, ಸೈಟ್ ಕೊಡಿಸುವೆ ಎಂದು ಭರವಸೆ ನೀಡಿದ್ದ. ಇದಕ್ಕಾಗಿ ನಮ್ಮಿಂದ 72 ಲಕ್ಷ ರೂ. ತೆಗೆದುಕೊಂಡಿದ್ದಾನೆ. ಆದರೆ, ಈವರೆಗೂ ನೌಕರಿ ಕೊಡಿಸದೆ ಮತ್ತು ಸೈಟ್ ಸಹ ಕೊಡಿಸದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net