ಹು-ಧಾ ಪಾಲಿಕೆ ಸಾಮಾನ್ಯ ಸಭೆ; ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಸಭಾತ್ಯಾಗ

DSC_2154
Published on

ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿನಗರಗಳಲ್ಲಿ ಕಸ ವಿಲೇವಾರಿ ಸಮಸ್ಯೆ, ಡೆಂಘೆಯAಥ ಸಾಂಕ್ರಾಮಿಕ ರೋಗದ ಭೀತಿ, ಅಽಕಾರಿಗಳ ಸ್ಪಂದನೆ ಇಲ್ಲದಿರುವ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪಾಲಿಕೆಯ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಸಭಾಭವನದಲ್ಲಿ ಮೇಯರ್ ವೀಣಾ ಬರದ್ವಾಡ ಗೈರುಹಾಜರಿಯಲ್ಲಿ ಉಪ ಮೇಯರ್ ಸತೀಶ ಹಾನಗಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಮಳೆಗಾಲದಲ್ಲಿ ಕಸ ವಿಲೇವಾರಿ ಸಮರ್ಪಕವಾಗುತ್ತಿಲ್ಲ. ನಾಲಾಗಳಲ್ಲಿ ಹೂಳು ತುಂಬಿದ್ದು, ಗಿಡಗಂಟಿಗಳು ಬೆಳೆದಿವೆ. ಸದಸ್ಯರು ಅಽಕಾರಿಗಳಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಅವಳಿನಗರದಲ್ಲಿ ಡೆಂಘೆ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ರೋಗದಿಂದ ಸತ್ತರೆ ಯಾರು ಹೊಣೆ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಹೊಸ ವಾಹನಗಳು ಬರುವವರೆಗೆ ಈಗಿರುವ ವಾಹನಗಳ ಟ್ರಿಪ್ ಏಕೆ ಹೆಚ್ಚಿಸುತ್ತಿಲ್ಲ. ಉಪ ಮೇಯರ್ ಸಬೂಬು ಹೇಳುವ ಅಽಕಾರಿಗಳಿಗೆ ಸಾಥ್ ಕೊಡಬಾರದು. ಮೇಯರ್, ಉಪ ಮೇಯರ್ ಮತ್ತು ಆಯುಕ್ತರು ವಾರ್ಡ್ಗಳಲ್ಲಿ ಸಂಚರಿಸಿ ಕಸ ವಿಲೇವಾರಿ ಕ್ರಮವನ್ನು ಪರಿಶೀಲಿಸಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ತಮ್ಮ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುತ್ತಿಲ್ಲ ಎಂದು ಪ್ರತಿಪಕ್ಷ ನಾಯಕಿ ಸುವರ್ಣಾ ಕಲ್ಲಕುಂಟ್ಲಾ ನೇತೃತ್ವದಲ್ಲಿ ವೇದಿಕೆ ಎದುರು ಧರಣಿ ನಡೆಸಿದರು. ಕಸ ವಿಲೇವಾರಿ ಸಮಸ್ಯೆ ಬಗ್ಗೆ ಚರ್ಚಿಸದೆ ವಿಷಯಪಟ್ಟಿ ಓದುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ `ಅಯ್ಯಯ್ಯೋ ಅನ್ಯಾಯ' ಎನ್ನುತ್ತ ಸಭಾತ್ಯಾಗ ಮಾಡಿದರು. ನಂತರ ಪಾಲಿಕೆ ಮುಂಭಾಗದ ಮೆಟ್ಟಿಲುಗಳ ಮೇಲೆ ಕುಳಿತು ಕೆಲಕಾಲ ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net