ಗಣೇಶೋತ್ಸವ ವಿರೋಧದ ಹಿಂದೆ ರಾಜಕೀಯ ಕುಮ್ಮಕ್ಕು; ಪ್ರಲ್ಹಾದ ಜೋಶಿ ಆರೋಪ

h1-Edga Joshi 2
Published on

ಹುಬ್ಬಳ್ಳಿ: ನಗರದ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಗಣೇಶ ಮೂತಿರ್ ಪ್ರತಿಷ್ಠಾಪನೆ ಪ್ರಶ್ನಿಸಿ ಅಂಜುಮನ್​ ಸಂಸ್ಥೆ, ಇತರರು ಸುಪ್ರೀಂಕೋರ್ಟ್​ ಮೊರೆ ಹೋಗಿರುವ ಹಿಂದೆ ರಾಜಕೀಯ ಪಕ್ಷಗಳ ಕುಮ್ಮಕ್ಕು ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಬುಧವಾರ ಇಲ್ಲಿನ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂತಿರ್ ದರ್ಶನಾಶೀರ್ವಾದ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ರಾಜಕೀಯ ಪಕ್ಷಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಈ ಮೈದಾನ ಪಾಲಿಕೆಗೆ ಸೇರಿದ್ದು ಎಂದು ತೀರ್ಮಾನ ಆಗಿದೆ. ಈಗಾಗಲೇ ಗಣೇಶ ಪ್ರತಿಷ್ಠಾಪನೆಯೂ ಆಗಿದೆ. ರಾಜಕೀಯ ಪಕ್ಷಗಳು ವಿರೋಧ ಮಾಡಿದ್ದೇ ತಪ್ಪು. ಕಾಂಗ್ರೆಸ್​ ಪಕ್ಷ ಹಿಂದು ವಿರೋಧಿ ನೀತಿ ಬಿಡಬೇಕು. ದೇಶಾದ್ಯಂತ ಕಾಂಗ್ರೆಸ್​ ಸ್ಥಿತಿ ಏನಾಗಿದೆ ಎಲ್ಲರಿಗೂ ಗೊತ್ತಿದೆ. ಅದೇ ಸ್ಥಿತಿ ಕರ್ನಾಟಕದಲ್ಲೂ ಬರುತ್ತದೆ. ಕಾಂಗ್ರೆಸ್​ ಪಕ್ಷ ಎಲ್ಲದಕ್ಕೂ ಕಲ್ಲು ಹಾಕುತ್ತಿದೆ. ಇದು ಸರಿಯಲ್ಲ. ಅವರ ಕುಮ್ಮಕ್ಕಿನಿಂದಲೇ ಇದೆಲ್ಲ ಆಗುತ್ತಿದೆ ಎಂದು ಆರೋಪಿಸಿದರು.
ಗಣೇಶ ಪ್ರತಿಷ್ಠಾಪನೆ ಹಿನ್ನೆಲೆ ಮೈದಾನದ ಸುತ್ತ ಭಾರಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ. ಆರ್​ಎಎ್​, ಕೆಎಸ್​ಆರ್​ಪಿ, ಸಿಎಆರ್​ ಸೇರಿದಂತೆ ಇತರ ಟಕಗಳ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಮೈದಾನದ ಸುತ್ತ ಡ್ರೋಣ್​ ಕಣ್ಗಾವಲು ಇದೆ. ಶ್ವಾನದಳ, ಬಾಂಬ್​ ನಿಷ್ಕ್ರಿಯ ದಳ ಆಗಾಗ ಪರಿಶೀಲನೆ ನಡೆಸುತ್ತಿದೆ. ಇಂದು ಮಧ್ಯಾಹ್ನ ಗಣೇಶ ಮೂತಿರ್ ವಿಸರ್ಜನೆ ನಡೆಯಲಿದೆ.

ತಾಳ ಹಾಕಿದ ಜೋಶಿ, ಶೆಟ್ಟರ್​
ಚನ್ನಮ್ಮ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್​ ಭಜನಾ ಮಂಡಳಿ ಜತೆಗೆ ತಾಳ ಹಾಕಿ ಸಂಭ್ರಮಪಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್​, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶಿರ್ ಮಹೇಶ ಟೆಂಗಿನಕಾಯಿ, ಮತ್ತಿತರರು ಸಾಥ್​ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net