ಹುಬ್ಬಳ್ಳಿ-ಬೆಳಗಾವಿ ವೋಲ್ವೊ ಬಸ್ ಸಂಚಾರ ಪುನರಾರಂಭ

1010
Published on

ಬೆಳಗಾವಿ: ಲಾಕ್‌ಡೌನ್ ಕಾರಣದಿಂದಾಗಿ 9 ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿ-ಬೆಳಗಾವಿ ಮಧ್ಯೆ ತಡೆ ರಹಿತ ವೋಲ್ವೊ ಬಸ್ ಸಂಚಾರವನ್ನು ಸಾರ್ವಜನಿಕರ ಬೇಡಿಕೆಯ ಮೇರೆಗೆ ಪುನರಾರಂಭಿಸಲಾಗಿದೆ. ಬಸ್‌ಗಳು ಹುಬ್ಬಳಿಯ ಹೊಸ ಬಸ್ ನಿಲ್ದಾಣದಿಂದ ಸಂಚರಿಸುತ್ತವೆ.

ನಿತ್ಯ ಬೆಳಗ್ಗೆ 8.30, 9.00, 11.15 ಮಧ್ಯಾಹ್ನ 12.45, 3.00, 3.30 ಸಂಜೆ 5.30 ಮತ್ತು 6.00ಕ್ಕೆ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಏಕ ಕಾಲಕ್ಕೆ ಸೇವೆ ಸಿಗಲಿದೆ. ಪ್ರಯಾಣಕ್ಕೆ ಕೇವಲ 150 ರೂ. ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net