ಹುಬ್ಬಳ್ಳಿ ವಕೀಲರ ಸಂಘಕ್ಕೆ ಬಾಣದ ಅಧ್ಯಕ್ಷ

BANADA
Published on

ಹುಬ್ಬಳ್ಳಿ: ತೀವ್ರ ತುರುಸಿನಿಂದ ಕೂಡಿದ್ದ ಹುಬ್ಬಳ್ಳಿ ವಕೀಲರ ಸಂಘದ ಚುನಾವಣೆಯಲ್ಲಿ ಎಂ.ಎಸ್. ಬಾಣದ ಅಧ್ಯಕ್ಷರಾಗಿ ಹಾಗೂ ಹನುಮಂತ ಶಿಗ್ಗಾಂವ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ.

ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆದು ರಾತ್ರಿ ಫಲಿತಾಂಶ ಘೋಷಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಾಣದ ಅವರು ಪ್ರತಿಸ್ಪರ್ಧಿ ಡಿ.ಎಂ. ನರಗುಂದ ಅವರನ್ನು 247 ಮತಗಳ ಅಂತರದಿಂದ ಸೋಲಿಸಿದರು. ಬಾಣದ 473 ಮತಗಳನ್ನು ಪಡೆದರೆ, ನರಗುಂದ ಅವರಿಗೆ 226 ಮತ ಬಿದ್ದಿವೆ.

ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಸಿ.ಆರ್.ಪಾಟೀಲ, ಸಿ.ಬಿ. ಪಾಟೀಲ, ಎಸ್.ಜೆ. ನಿರ್ಮಾಣಿಕ, ಎಸ್.ಕೆ. ಕಾಯಕಮಠ ಹಾಗೂ ಎಚ್.ಎಲ್. ನದಾಫ್ ಸ್ಪರ್ಧಿಸಿದ್ದರು.

ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹನುಮಂತ ಶಿಗ್ಗಾಂವ 614 ಮತಗಳನ್ನು ಪಡೆದರು. ಅವರ ಪ್ರತಿಸ್ಪರ್ಧಿ ಪಿ.ಎಚ್. ತೋಟದ 446 ಮತಗಳನ್ನು ಪಡೆದರು ಎಂದು ಚುನಾವಣಾಕಾರಿ ಎಸ್.ಜಿ.ಅರಗಂಜಿ ತಿಳಿಸಿದ್ದಾರೆ.

ರಾತ್ರಿ 10.30ರವರೆಗೆ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸ್ಥಾನದ ಫಲಿತಾಂಶ ಮಾತ್ರ ಪ್ರಕಟವಾಗಿದ್ದು, ಉಪಾಧ್ಯಕ್ಷ, ಜಂಟಿ ಕಾರ್ಯದರ್ಶಿ, ಖಜಾಂಚಿ, ಇನ್ನುಳಿದ ಪದಾಧಿಕಾರಿಕಾರಿಗಳ ಮತ ಎಣಿಕೆ ಕಾರ್ಯ ಮುಂದುವರಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net