ಬಿಎಎಂಎಸ್ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ

IMG_20231116_192411_756-1.jpg
Published on

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ 2023-24ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ ಗುರುವಾರ ಏರ್ಪಡಿಸಲಾಗಿತ್ತು.

ಅತಿಥಿಗಳಾಗಿದ್ದ ಜ್ಯೋತಿಷ್ಯಶಾಸ್ತ್ರ ವಿದ್ವಾನ್ ಗೋಪಾಲಕೃಷ್ಣ ಭಟ್ಟ ಕಂಡ್ರಮನೆ ಅವರು ಮಾತನಾಡಿ, ಆಯುರ್ವೇದ ವಿಷಯ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಅಭಿನಂದನಾರ್ಹರು. ಆಯುರ್ವೇದ ಇಂದು ಬಹಳ ಮಹತ್ವ ಪಡೆದಿದೆ. ಇದು ನಿತ್ಯ ಜೀವನದಲ್ಲಿ ಆಹಾರ ವಿಹಾರದ ಬಗ್ಗೆ ತಿಳಿಸುವುದಲ್ಲದೇ ಹೊರಗಿನ ರೋಗ, ಒಳಗಿನ ರೋಗವನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ ಎಂದರು.

ಇಂದ್ರಿಯ ಹಾಗೂ ಮನ ಹೇಗೆ ಸ್ವಸ್ಥವಾಗಿರಬೇಕೆಂಬುದನ್ನು ಆಯುರ್ವೇದ ತಿಳಿಸುತ್ತದೆ. ಅತ್ಯಂತ ಶ್ರೇಷ್ಟವಾದ ಆಯುರ್ವೇದವನ್ನು ಭಾರತವು ಜಗತ್ತಿಗೆ ಪರಿಚಯಿಸಿದೆ. ಇದನ್ನು ಆಯ್ಕೆ ಮಾಡಿಕೊಂಡ ವಿದ್ಯಾಥಿರ್ಗಳು ಹೆಚ್ಚಿನ ರೀತಿಯಲ್ಲಿ ಜನಸೇವೆ ಮಾಡಿ ಹೆಸರು ಗಳಿಸಬೇಕೆಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್., ಸಂಸ್ಥೆಯ ಅಭಿವೃದ್ದಿ ಜತೆಗೆ ಆಯುಷ್ ವಿದ್ಯಾಥಿರ್ಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಅನೇಕ ಸುಧಾರಣಾ ಕಾರ್ಯಕ್ರಮಗಳನ್ನು ಮತ್ತು ನಿಯಮಗಳನ್ನು ಶ್ರೀವಾಗಿ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಆಯುರ್ವೇದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್ ಹಾಗೂ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಜೆ.ಆರ್. ಜೋಶಿ ಉಪಸ್ಥಿತರಿದ್ದರು. ಪಾಲಕರಾದ ಸಂದೀಪ ಕುಲಕರ್ಣಿ ತಮ್ಮ ಅನುಭವ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net