

ಹುಬ್ಬಳ್ಳಿ: ಇಲ್ಲಿಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಅಭ್ಯುದಯ ವಿದ್ಯಾರ್ಥಿ ಸಂಘದ ವತಿಯಿಂದ ಮಂಗಳವಾರ ಸಕ್ಷಮ್, ಫ್ಯಾಕಲ್ಟಿ ಡೆವಲಪಮೆಂಟ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಉಪನ್ಯಾಸಕ ಹರಿ ಪಿ. ಗುಪ್ತಾ ಮಾತನಾಡಿ, ಅಧ್ಯಾಪಕರನ್ನು ಸಶಕ್ತಗೊಳಿಸಲು ವಿಶ್ವ ದರ್ಜೆಯ ವೃತ್ತಿಪರತೆಯನ್ನು ಅಭಿವೃದ್ಧಿಪಡಿಸಲು ಮತ್ತು ಮಾನವ ಕುಲವನ್ನು ಸಹಾನುಭೂತಿಯಿಂದ ಗುಣಪಡಿಸುವ ಕುರಿತು ಎರಡು ದಿನದ ಕಾರ್ಯಾಗಾರದಲ್ಲಿ ತರಬೇತಿ, ಮಾಹಿತಿ ನೀಡಲಾಯಿತು ಎಂದರು.
ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಎ.ಎಸ್. ಪ್ರಶಾಂತ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪಪ್ರಾಂಶುಪಾಲ ಡಾ. ಜೆ.ಆರ್. ಜೋಶಿ, ಅಭ್ಯುದಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಾ. ಅನಿತಾ ಹಲಗತ್ತಿ ಉಪಸ್ಥಿತರಿದ್ದರು.
ಬುಧವಾರ ನಡೆದ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸುಮಾರು 50ಕ್ಕೂ ಹೆಚ್ಚು ಶಿಕ್ಷಕ ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡರು.