

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಆಡಳಿತ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮೇರುನಂದನ್ ಅವರನ್ನು ವ್ಯಾಪಾರಸ್ಥರ ಸಂಘದಿಂದ ಸನ್ಮಾನಿಸಲಾಯಿತು.
ಎಪಿಎಂಸಿಗೆ ಚುನಾಯಿತ ಆಡಳಿತ ಮಂಡಳಿ ಇಲ್ಲದ ಹಿನ್ನೆಲೆಯಲ್ಲಿ ಇವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ವರ್ತಕರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ಮತ್ತು ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ ಅವರ ನೇತೃತ್ವದಲ್ಲಿ ಮಂಗಳವಾರ ಅವರನ್ನು ಸಮಿತಿ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಸಂಘದ ವೀರಣ್ಣ ವಾಲಿ, ರುದ್ರಪ್ಪ ಬೆಟಗೇರಿ, ಸಿದ್ದು ಅಳಗವಾಡಿ, ಸುರೇಶ ಜೈನ್, ಚಂದ್ರು ಪೂಜಾರ, ವಿನೋದ ತಲ್ಲೂರ, ಗುಂಡಪ್ಪ ಸಾವುಕಾರ, ಎಚ್.ಎಂ. ತಲವಾಯಿ ಮುಂತಾದವರು ಉಪಸ್ಥಿತರಿದ್ದರು.