

ಹುಬ್ಬಳ್ಳಿ: ಹುಬ್ಬಳ್ಳಿ- ಅಂಕೋಲಾ ಹೊಸ ರೈಲು ಮಾರ್ಗ ಕುರಿತು ನೈರುತ್ಯ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಅವರು ಚರ್ಚೆ ನಡೆಸಿದರು.
ನಗರದಲ್ಲಿರುವ ನೈಋತ್ಯ ರೈಲ್ವೆ ಕಚೇರಿಗೆ ಗುರುವಾರ ಭೇಟಿ ನೀಡಿದ ಅವರು ಅಂಕೋಲಾ ಹೊಸ ಮಾರ್ಗದ ಅನುಷ್ಠಾನ ಮತ್ತು ಕಾನೂನು, ಪರಿಸರ ತೊಡಕುಗಳ ಬಗ್ಗೆ ಚಚಿರ್ಸಿದರು.
ಇತ್ತೀಚೆಗೆ ಹೈಕೊರ್ಟ್ನಲ್ಲಿ ದಾಖಲಾಗಿದ್ದ ಸಾರ್ವಜನಿಕ ರಿಟ್ ಅಜಿರ್ಗಳು ನಿಕಾಲಿ (ಡಿಸ್ಪೋಸಲ್) ಆದ ಮೇಲೆ ಯೋಜನೆಗೆ ತೀವ್ರ ಗತಿಯಿಂದ ಚಾಲನೆ ದೊರೆತಿದೆ. ಇದಕ್ಕಾಗಿ ಸರ್ವೇ ಮತ್ತು ಕಾಮಗಾರಿಗೆ ಬೇಕಾದ ವರದಿ ತಯಾರಿಸಬೇಕು. ಇದಕ್ಕೆ ಪ್ರಯತ್ನಗಳು ತೀವ್ರ ಗತಿಯಲ್ಲಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಗತ್ಯ ಸಹಕಾರ ಕೊಡಿಸುವ ಭರವಸೆ ನೀಡಿದರು.
ಹುಬ್ಬಳ್ಳಿ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಮಾತನಾಡಿ, ಹುಬ್ಬಳ್ಳಿ ಅಂಕೋಲಾ ಹೊಸ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಅತೀ ಶೀರ್ಘದಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ. ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ ನಿರ್ದೇಶನದ ಮೇರೆಗೆ ಫೋರ್-ವೇ (4 -ಮಾರ್ಗ) ರೈಲ್ವೆ ಮಾರ್ಗದ ಯೋಜನೆ ಮತ್ತು ಇಂಟಿಗ್ರೆಟೆಡ್ ಟ್ರಾನ್ಫೋರ್ಟ್ (ರೋಡ್, ರೇಲ್ & ಬಂದರು ) ಪ್ರಾಜೆಕ್ಟ್ ತಯಾರಿಸಲು ಸಮೀಕ್ಷೆ ಪ್ರಾರಂಭ ಮಾಡಿದ್ದೇವೆ.
ಸರ್ವೇ ಮುಗಿದ ತಕ್ಷಣ ಇದರ ವರದಿಯನ್ನು ನ್ಯಾಷನಲ್ ಬೋರ್ಡ್ಗೆ ಸಲ್ಲಿಸಲಾಗುವುದು. ಬೋರ್ಡ್ ಒಪ್ಪಿಗೆ ದೊರೆತ ಕೂಡಲೇ ಮುಂದಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕಾನೂನು ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪರಿಸರ ಅಧಿಕಾರಿ ಅಜಯಸಿಂಗ್ ಅವರು ಮಾಹಿತಿ ನೀಡಿದರು. ನೈರುತ್ಯ ರೈಲ್ವೆಯ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.