Hubli-Ankola Railway ಮಾರ್ಗ ವಿಚಾರ 2025 ರ ಜನವರಿ ಅಂತ್ಯಕ್ಕೆ ಮಹತ್ವದ ಬೆಳವಣಿಗೆ

Hubli-Ankola Railway
Published on

ಕಾರವಾರ: ಹುಬ್ಬಳ್ಳಿ-ಅಂಕೋಲಾ ರೈಲ್ವೆ (Hubli-Ankola Railway) ಮಾರ್ಗದ ಪರಿಷ್ಕೃತ ವಿಸ್ತçತ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದ್ದು, 2025 ರ ಜನವರಿ ಅಂತ್ಯದೊಳಗೆ ರೈಲ್ವೆ ಬೋರ್ಡ್ಗೆ ಕಳಿಸಲಾಗುವುದು ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಹುಬ್ಬಳ್ಳಿಯ ರೈಲ್ವೆ ಭವನದಲ್ಲಿ ಭಾನುವಾರ ನಡೆದ ರೈಲು ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ನಂತರ ಅವರು ಪತ್ರಿಕಾ ಹೇಳಿಕೆಯೊಂದನ್ನು ನೀಡಿದ್ದಾರೆ. ಹುಬ್ಬಳ್ಳಿ-ಅಂಕೋಲಾ, ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಡಿಪಿಆರ್ ಮುಕ್ತಾಯಗೊಳಿಸಿ ಶೀಘ್ರ ಮಂಡಳಿಗೆ ಕಳಿಸುವಂತೆ ಮನವಿ ಮಾಡಿದ್ದೆ.

Hubli-Ankola Railway ಬಗ್ಗೆ ಸೋಮಣ್ಣ ಹೇಳಿದ್ದಿಷ್ಟು

ಅದಕ್ಕೆ ಸ್ಪಂದಿಸಿದ ಸೋಮಣ್ಣ ಅವರು, ಹುಬ್ಬಳ್ಳಿ-ಅಂಕೋಲಾ ರೈಲ್ವೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೂಚನೆಯಂತೆ ಎಲ್ಲ ಪಾಲುದಾರ ಸರ್ಕಾರಿ ಇಲಾಖೆಗಳ ಅಭಿಪ್ರಾಯ ಪಡೆದು, ಪರಿಷ್ಕೃತ ಡಿಪಿಆರ್ ತಯಾರಿಕೆ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ವಿವರಿಸಿದ್ದಾರೆ. ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಅಂತಿಮ ಹಂತದ ಸರ್ವೇ ಕೆಲಸ ಪ್ರಾರಂಭವಾಗಿದ್ದು, ಮುಂದಿನ ಜುಲೈರೊಳಗೆ ಡಿಪಿಆರ್‌ನ್ನು ರೈಲ್ವೆ ಬೋರ್ಡ್ಗೆ ರವಾನಿಸಬೇಕು ಎಂದಿದ್ದಾರೆ.

ದಾಂಡೇಲಿಗೆ ಸ್ಥಗಿತವಾಗಿರುವ ಪ್ರಯಾಣಿಕರ ರೈಲು ಸಂಚಾರವನ್ನು ಪುನಃ ಪ್ರಾರಂಬಿಸಬೇಕು. ಖಾನಾಪುರ ರೈಲ್ವೆ ನಿಲ್ದಾಣ ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಲೋಂಡಾ ರೈಲು ನಿಲ್ದಾಣ ನಿಲ್ದಾಣ ಕಾಮಗಾರಿ ತ್ವರಿತವಾಗಿ ಮುಕ್ತಾಯಗೊಳಿಸಬೇಕು ಎಂದು ವಿನಂತಿಸಿದ್ದು, ಸಚಿವರು ಅದಕ್ಕೆ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹುಬ್ಬಳ್ಳಿ-ಕಿತ್ತೂರು-ಬೆಳಗಾವಿ ಹೊಸ ರೈಲ್ವೆ ಯೋಜನೆ ಕುರಿತಂತೆ ಹಾಗೂ ಅನೇಕ ರೈಲು ಗಾಡಿಗಳನ್ನು ವಿವಿಧೆಡೆ ನಿಲುಗಡೆ ಮಾಡುವ ಸಂಬಂಧ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ವ್ಯವಹಾರಗಳ ವಿತರಣಾ ಸಚಿವ ಪ್ರಲ್ಹಾದ ಜೋಶಿ ಉಪಸ್ಥಿತರಿದ್ದರು ಎಂದು ಕಾಗೇರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net