

ಹುಬ್ಬಳ್ಳಿ : ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಬಿಡುಗಡೆಗೊಳಿಸಿರುವ ಪ್ರಯಾಣಿಕರ ಸಂತೃಪ್ತಿ ಸೂಚ್ಯಂಕದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ 8ನೇ ಸ್ಥಾನ ಲಭಿಸಿದೆ.
ದೇಶದ 62 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿರುವ ಹುಬ್ಬಳ್ಳಿ, ಕಳೆದ ವರ್ಷಕ್ಕಿಂತ 0.2 ರಷ್ಟು ಹೆಚ್ಚಿನ ಅಂಕ ಗಳಿಸಿದೆ.
ವಿಮಾನ ನಿಲ್ದಾಣದಲ್ಲಿನ ಸುರಕ್ಷತೆ, ಸ್ವಚ್ಛತೆ, ಸರಕು ಸಾಗಣೆ ವ್ಯವಸ್ಥೆ, ಸಹಾಯ ಒದಗಿಸುವ ಬಗೆ, ವಿಮಾನಗಳ ಆಗಮನ-ನಿರ್ಗಮನ ವೇಳಾಪಟ್ಟಿ ಪ್ರದರ್ಶನ, ಕಾಯುವ ವ್ಯವಸ್ಥೆ, ತಪಾಡಣೆ ವ್ಯವಸ್ಥೆ ಸೇರಿ ಒಟ್ಟು 33 ಮಾನದಂಡಗಳನ್ನು ಗಮನಿಸಿ ಪ್ರಯಾಣಿಕರ ಸಂತೃಪ್ತಿ ಸೂಚ್ಯಂಕ್ಕೆ ಪರಿಗಣಿಸಲಾಗುತ್ತದೆ.
2024ನೇ ವರ್ಷದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ 5 ಅಂಕಗಳ ಪೈಕಿ 4.91 ಅಂಕದೊಂದಿಗೆ 10ನೇ ಸ್ಥಾನದಲ್ಲಿತ್ತು. ಈ ಬಾರಿ 4.93 ಅಂಕ ಪಡೆದುಕೊಂಡಿದೆ. ಮೈಸೂರು, ಕಲಬುರಗಿ ವಿಮಾನ ನಿಲ್ದಾಣಗಳು 16ನೇ ಸ್ಥಾನದಲ್ಲಿ, ಬೆಳಗಾವಿ 7ನೇ ಸ್ಥಾನದಲ್ಲಿವೆ. ರಾಜಸ್ಥಾನದ ಉಚಯಪುರ ವಿಮಾನ ನಿಲ್ದಾಣ ಮೊದಲ ಸ್ಥಾನದಲ್ಲಿದೆ.