

ಹುಬ್ಬಳ್ಳಿ: ಸ್ಕಾಟ್ಲ್ಯಾಂಡ್ನಲ್ಲಿ ಆಯೋಜಿಸಿದ್ದ ಹಿರಿಯರ ( 50ವರ್ಷ ಮೇಲ್ಪಟ್ಟ) ಇಂಡೋ-ಸ್ಕಾಟ್ಲ್ಯಾಂಡ್ ಫೆಲೋಶಿಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಉದ್ಯಮಿ ಗುರುದೀಪ ಸಿಂಗ್ ಸರಣಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಜುಲೈ 27ರಿಂದ ಆಗಸ್ಟ್ 3ರವರೆಗೆ ನಡೆದ ನಿಗದಿತ ಓವರ್ಗಳ ಪಂದ್ಯಾವಳಿಯಲ್ಲಿ ಭಾರತದ ರಾಯಲ್ ಇಂಡಿಯನ್ ತಂಡ ಐದು ಪಂದ್ಯಗಳ ಸರಣಿಯನ್ನು 3-1ರಿಂದ ಜಯಿಸಿತು. (5ನೇ ಪಂದ್ಯ ಮಳೆಯಿಂದ ರದ್ದಾಯಿತು). ಈ ತಂಡದ ಪರವಾಗಿ ಆಡಿದ್ದ ಗುರುದೀಪ್ ಸಿಂಗ್ ನಾಲ್ಕು ಪಂದ್ಯಗಳಲ್ಲಿ 1 ಶತಕ ಸಹಿತ 219 ರನ್ ಗಳಿಸಿದರು. ಬೌಲಿಂಗ್ನಲ್ಲಿ 2 ವಿಕೆಟ್ ಪಡೆದರಲ್ಲದೇ, ಒಂದು ರನೌಟ್ಗೂ ಕಾರಣರಾಗಿದ್ದರು.
ಹುಬ್ಬಳ್ಳಿಯಲ್ಲೇ ಹುಟ್ಟಿ ಬೆಳೆದ ಗುರುದೀಪ ಅವರು ಫಾತಿಮಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಕ್ರಿಕೆಟ್ ಆಟಗಾರರಾಗಿದ್ದರು. ಪುಣೆಯ ಪ್ರದೀಪ ಗೋಡಬೋಲೆ ನಾಯಕರಾಗಿದ್ದ ರಾಯಲ್ ಇಂಡಿಯನ್ ತಂಡದಲ್ಲಿ ಗುರದೀಪ ಕರ್ನಾಟಕಧ ಏಕೈಕ ಆಟಗಾರರಾಗಿದ್ದರು. ಸ್ಕಾಟ್ಲಾಂಡ್ನ ಪೋರ್ಟಿ ಕ್ಲಬ್ ಮತ್ತು ರೋಟರಿ ಸಂಸ್ಥೆಯವರು ಈ ಸೌಹಾರ್ದ ಪಂದ್ಯಾವಳಿ ಆಯೋಜಿಸಿದ್ದು, ಪಾಲ್ಗೊಂಡ ಎಲ್ಲರೂ ರೋಟರಿ ಸದಸ್ಯರೇ ಆಗಿದ್ದರು.
ಗುರದೀಪ ಸಹ 1995ರಿಂದ ರೋಟರಿ ಕ್ಲಬ್ ಹುಬ್ಬಳ್ಳಿ ಮಿಡ್ಟೌನ್ ಸದಸ್ಯರಾಗಿದ್ದು, ಬಾಂಗ್ಲಾದಲ್ಲಿ ನಡೆದ ಮಿನಿ ರೋಟರಿ ಹಬ್ಬದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರಲ್ಲದೇ ಹುಬ್ಬಳ್ಳಿ ತಂಡ ರನ್ನರ್ಸ್ ಅಪ್ ಆಗಿತ್ತು. ಸೆಪ್ಟೆಂಬನ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪಂದ್ಯಾವಳಿಗೆ ಗುರದೀಪ ಆಯ್ಕೆಯಾಗಿದ್ದಾರೆ.