ಹುಬ್ಬಳ್ಳಿ ಮಹಿಳಾ ಲೀಗ್ ಕ್ರಿಕೆಟ್​ಗೆ ಚಾಲನೆ

womens league
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿ ವುಮೆನ್ಸ್ ಕ್ರಿಕೆಟ್ ಅಕಾಡೆಮಿ ಆಯೋಜಿಸಿರುವ ಹುಬ್ಬಳ್ಳಿ ಮಹಿಳಾ ಲೀಗ್ ಕ್ರಿಕೆಟ್ ಟೂರ್ನಾಮೆಂಟ್​ಗೆ ನಗರದ ಬಿಜಿಎ ಮೈದಾನದಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಅಕಾಡೆಮಿಯ ಉಪಾಧ್ಯಕ್ಷ ರಮೇಶ ನಾಯಕ ಉದ್ಘಾಟಿಸಿದರು. ಅಧ್ಯಕ್ಷ ಸಂತೋಷ ಕಾಮತ್, ಕಾರ್ಯದರ್ಶಿ ವೃಂದಾ ಶಾನಭಾಗ, ಮುಖ್ಯ ಕೋಚ್ ಸಂತೋಷಕುಮಾರ ಶೇರೆಗಾರ, ಪ್ರಶಾಂತ ಹಜೇರಿ, ಲಿಂಗಪ್ಪ ಡಿ., ಇತರರು ಇದ್ದರು.

ಮೊದಲ ಪಂದ್ಯದಲ್ಲಿ ವಿಜಯಪುರ ವುಮೆನ್ಸ್ ಕ್ರಿಕೆಟ್ ಕ್ಲಬ್, ಹುಬ್ಬಳ್ಳಿ ವುಮೆನ್ಸ್ ಕ್ರಿಕೆಟ್ ಅಕಾಡೆಮಿ ವಿರುದ್ಧ 38ರನ್​ಗಳ ಅಂತರದಿಂದ ಜಯ ಸಾಧಿಸಿತು. 2ನೇ ಪಂದ್ಯದಲ್ಲೂ ವಿಜಯಪುರ ವುಮೆನ್ಸ್ ಕ್ರಿಕೆಟ್ ಕ್ಲಬ್, ಉಡುಪಿಯ ಎಸ್​ಎಂಎಸ್ ಟೈಗರ್ ತಂಡದ ವಿರುದ್ಧ 4 ವಿಕೆಟ್​ಗಳಿಂದ ಗೆಲುವು ದಾಖಲಿಸಿತು.

ಟೂರ್ನಾಮೆಂಟ್​ನಲ್ಲಿ 3 ತಂಡಗಳು ಪಾಲ್ಗೊಂಡಿದ್ದು, ಜೂ. 17ರವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net