ಸ್ತ್ರೀಯರನ್ನು ಪ್ರತಿಯೊಬ್ಬರೂ ಗೌರವಿಸೋಣ

8-KSS HBL
Published on

ಹುಬ್ಬಳ್ಳಿ: ಮಹಿಳೆ ಇಂದು ಅಬಲೆ ಅಲ್ಲ, ಸಬಲೆಯಾಗಿದ್ದಾಳೆ. ಸಮಾಜದಲ್ಲಿ ಮಹಿಳೆಯರಿಗೆ ಪ್ರತಿಯೊಬ್ಬರೂ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಕಿಮ್್ಸ ಸಹಪ್ರಾಧ್ಯಾಪಕಿ ಡಾ. ಅಶ್ವಿನಿ ಎಚ್.ಆರ್. ಹೇಳಿದರು.

ನಗರದ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿಗಳು ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಹಿಳೆಯರು ಇಂದು ಮುಂದೆ ಬಂದಿದ್ದಾರೆ ಎಂದರೆ ಅದರಲ್ಲಿ ಪುರುಷರ ಪಾತ್ರವೂ ಪ್ರಮುಖವಾಗಿದೆ. ಕುಟುಂಬದಲ್ಲಿ ಪತಿ-ಪತ್ನಿಯರಿಬ್ಬರೂ ಸಮಾನರು ಎಂಬ ಭಾವದಿಂದ ಬದುಕಬೇಕು. ಅಂದಾಗ ಮಾತ್ರ ಸಮಾಜ ಬದಲಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನಕದಾಸ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರನಾಥ ದಂಡಿನ ಮಾತನಾಡಿ, ಭಾರತದ ಸಂಸ್ಕೃತಿಯಲ್ಲಿ ತಾಯಂದಿರಿಗೆ, ಮಹಿಳೆಯರಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಒಬ್ಬ ತಾಯಿ ನೂರು ಶಿಕ್ಷಕಿಯರಿಗಿಂತ ಮಿಗಿಲಾದವಳು. ಮಹಿಳೆಯರನ್ನು ಗೌರವ ಭಾವದಿಂದ ಕಾಣಬೇಕು ಎಂದರು.

ಪ್ರಶಿಕ್ಷಣಾರ್ಥಿ ರಾಜಶ್ರೀ, ಶಶಿಕಾಂತ ಮಾತನಾಡಿದರು. ಪ್ರಾಚಾರ್ಯು ಡಾ. ಎನ್.ಡಿ. ಶೇಖ್, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ. ಎಂ.ಆರ. ಭಟ್, ಡಾ. ಎ.ಜೆ. ಪಾಟೀಲ, ಪಪೂ ಕಾಲೇಜ್ ಪ್ರಾಚಾರ್ಯ ಸಂದೀಪ ಬೂದಿಹಾಳ, ಡಾ. ಎಚ್.ವಿ. ಬೆಳಗಲಿ, ಡಾ. ರಾಜಕುಮಾರ ಪಾಟೀಲ, ಡಾ. ಪಿ.ಎಸ್. ಹೆಗಡಿ, ಡಾ. ಎಂ.ಪಿ. ಚಳಗೇರಿ, ಡಾ. ಜೆ.ಸಿ. ಹಿರೇಮಠ, ಡಾ. ಎನ್.ಎಸ್. ಬಸನಾಳ, ದೈಹಿಕ ಶಿಕ್ಷಣ ನಿರ್ದೇಶಕ ಎಚ್.ಆರ್. ಕುರಿ, ಪ್ರಶಿಕ್ಷಣಾರ್ಥಿಗಳು ಇದ್ದರು. ಪ್ರಶಿಕ್ಷಣಾರ್ಥಿ ಸಹನಾ, ಲಕ್ಷ್ಮೀ ಪವಾರ, ವಿಕಾಸ, ವಿಶಾಲ ಎನ್. ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net