ವಿಶ್ವಕರ್ಮ ಸಮಾಜದ ಬೆಂಬಲ ಬಿಜೆಪಿಗೆ

RAMANNA
Published on

ಹುಬ್ಬಳ್ಳಿ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವುದು ನಮ್ಮ ಸಮಾಜಕ್ಕೆ ನೋವು ತಂದಿದೆ ಎಂದು ಹು-ಧಾ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಮತ್ತು ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜ ಬಿಜೆಪಿ ಜತೆಗಿದೆ. ಕೆ.ಪಿ. ನಂಜುಂಡಿ ಅವರು ಪಕ್ಷ ತೊರೆದರೂ ಸಮಾಜದ ಜನರು ಬಿಜೆಪಿ ಬೆಂಬಲಿಸುತ್ತೇವೆ. ಸಮಾಜದ ವಿಷಯದಲ್ಲಿ ನಂಜುಂಡಿ ಅವರ ಜತೆಗೆ ಇರುತ್ತೇವೆ. ಪಕ್ಷದ ವಿಚಾರದಲ್ಲಿ ಬಿಜೆಪಿ ಬೆಂಬಲಿಸುತ್ತೇವೆ. ಸಮಾಜದ ವಿಚಾರವೇ ಬೇರೆ, ರಾಜಕಾರಣವೇ ಬೇರೆ ಎಂದರು.
ವಿಶ್ವಕರ್ಮ ಸಮಾಜಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಹೀಗಾಗಿ, ಅವರ ಕೈ ಬಲಪಡಿಸಲು ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರಿಗೆ ಬೆಂಬಲ ನೀಡುತ್ತೇವೆ ಎಂದರು.
ಗಿರೀಶ ಬಡಿಗೇರ, ಬಲಭೀಮ ಪೋದಾರ, ಮಲ್ಲಪ್ಪ ಬಡಿಗೇರ, ಪ್ರಕಾಶ ಸಂಗಳದ, ಆರ್.ಕೆ. ಪತ್ತಾರ, ರವಿ ಕಮ್ಮಾರ, ಕಾಳಪ್ಪ ಬಡಿಗೇರ, ರತ್ನಾ ಬಡಿಗೇರ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net