

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪುಣೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 8ನೇ ಅಖಿಲ ಭಾರತ ಸಹಕಾರ ಬ್ಯಾಂಕುಗಳ ಸಮ್ಮೇಳನದಲ್ಲಿ ಹುಬ್ಬಳ್ಳಿ ಅರ್ಬನ್ ಕೋ-ಆಪ್ ಬ್ಯಾಂಕ್ ವರ್ಷದ ಅತ್ಯುತ್ತಮ ಬ್ಯಾಂಕ್ ಹಾಗೂ ಅತ್ಯುತ್ತಮ ಸಿಇಒ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಪ್ರಶಸ್ತಿ ಪಡೆದಿದೆ.
ಬ್ಯಾಂಕಿನ ಅಧ್ಯಕ್ಷ ವಿಕ್ರಮ ಶಿರೂರ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ ಹಾಗೂ ಪಂಚಾಕ್ಷರಿ ಮಠಪತಿ ಅತ್ಯುತ್ತಮ ಸಿಇಒ ಪ್ರಶಸ್ತಿಯನ್ನು ಎನ್ಯುುಸಿಎಫ್ಡಿಸಿ ಅಧ್ಯಕ್ಷ ಜ್ಯೋತೀಂದ್ರ ಮೆಹ್ತಾ ಅವರಿಂದ ಸ್ವೀಕರಿಸಿದರು.
ಕ್ರೆಸ್ಟ್ ಇನ್ಪೋ ಮೀಡಿಯಾ, ಬಿ ಟು ಬಿ ಇನ್ಪೋ ಮೀಡಿಯಾ, ನವದೆಹಲಿಯ ಎನ್ಯುುಸಿಎಫ್ಡಿಸಿ ಹಾಗೂ ಪುಣೆ ನಗರ ಸಹಕಾರಿ ಬ್ಯಾಂಕುಗಳ ಒಕ್ಕೂಟ ಕಾರ್ಯಕ್ರಮ ಆಯೋಜಿಸಿದ್ದವು.
ಹುಬ್ಬಳ್ಳಿ ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಶಾಂತರಾಜ ಪೋಳ, ಆನಂದ ಮನಗೊಳಿ, ಗಿರೀಶ ಉಪಾಧ್ಯಾಯ, ಆರ್ಬಿಐ ನಿರ್ದೇಶಕ ಮರಾಠೆ ಇದ್ದರು.