ಕರಾಟೆ ಚಾಂಪಿಯನ್​ಶಿಪ್​ನಲ್ಲಿ 28 ಪದಕಗಳು

karate medalist
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ 1ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಹುಬ್ಬಳ್ಳಿಯ ಕರಾಟೆ ಪಟುಗಳು ಉತ್ತಮ ಸಾಧನೆಗೈದಿದ್ದಾರೆ. 13ಚಿನ್ನ, 7 ಬೆಳ್ಳಿ ಹಾಗೂ 8 ಕಂಚು ಸೇರಿ 28 ಪದಕಗಳನ್ನು ಜಯಿಸಿದ್ದಾರೆ.

ತನುಶ್ರೀ ಪಾಲಿಂ 2 ಕಂಚು, ಮನೀಶ ಪಾಲಿಂ 1 ಕಂಚು, ನಿಹಾರಿಕಾ ಶ್ರೀರಾಮ 1 ಬೆಳ್ಳಿ, ಧನ್ವಿ ಶ್ರೀರಾಮ 1 ಬೆಳ್ಳಿ, 1 ಕಂಚು, ಸಚಿನ ಚಲವಾದಿ 2 ಕಂಚು, ವರ್ಷಾ ಚಲವಾದಿ 1ಚಿನ್ನ, 1 ಬೆಳ್ಳಿ, ಯಶ ಹುಟಗಿ 1 ಚಿನ್ನ, 1ಬೆಳ್ಳಿ, ಗಫೂರ ಕೋಳೂರು 2 ಚಿನ್ನ, ಸಮರ್ಥ ಹೊಕ್ರಿ 1 ಚಿನ್ನ, 1ಬೆಳ್ಳಿ, ನಿತ್ಯ ದಾನಿ 1ಚಿನ್ನ, 1ಬೆಳ್ಳಿ, ವರ್ಷಾ ಭೂಮಣ್ಣನವರ 2 ಚಿನ್ನ, ಸುಪ್ರೀತ ಮಿಸ್ಕಿನ್ 1 ಚಿನ್ನ, 1ಕಂಚು, ಸ್ವರಾ ಕಿಣಿ 1ಚಿನ್ನ, 1 ಕಂಚು, ಧೃತಿ ಲುನಿಯಾ 1 ಚಿನ್ನ, 1 ಬೆಳ್ಳಿ, ಗ್ರಂಥ ದೇವ 2 ಚಿನ್ನ ಪದಕಗಳನ್ನು ಗೆದ್ದಿದ್ದಾರೆ.

ವಿನೋದ ಭಾಂಡಗೆ, ಖುಷ್ಬೂ ಜೈನ್ ಹಾಗೂ ನಿತಿನ ಹುಟಗಿ ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net