

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್ನಲ್ಲಿ ನಡೆದ 13ನೇ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಶೂಟರ್ಗಳು 4 ಚಿನ್ನ, 8 ಬೆಳ್ಳಿ, 2 ಕಂಚು ಸೇರಿ 14 ಪದಕಗಳನ್ನು ಜಯಿಸಿದ್ದಾರೆ.
ಅಕಾಡೆಮಿಯಿಂದ 79 ಶೂಟರ್ಗಳು ಭಾಗವಹಿಸಿದ್ದರು. ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಪದಕ ವಿತರಣೆ ಮಾಡಿದರು.
ರಮೇಶ ಡಿ. 10ಮೀ. ಏರ್ ರೈಫಲ್ ಎನ್ಆರ್ ಮಾಸ್ಟರ್ನಲ್ಲಿ ಚಿನ್ನದ ಪದಕ, ಸಿದ್ದಾರ್ಥ ದಿವಟೆ 10ಮೀ. ಏರ್ ಪಿಸ್ತೂಲ್ ಐಎಸ್ಎಸ್ಎಫ್ನಲ್ಲಿ ಹಾಗೂ 50ಮೀ. ಫ್ರೀ ಪಿಸ್ತೂಲ್ನಲ್ಲಿ ಬೆಳ್ಳಿ ಪದಕ, ಶ್ರೀಕರ ಸಬನಿಸ್ 10ಮೀ. ಏರ್ ರೈಫಲ್ ಐಎಸ್ಎಸ್ಎಫ್ನ ಜೂನಿಯರ್ ಮತ್ತು ಯೂಥ ಎರಡು ವಿಭಾಗಗಳಲ್ಲಿ ಕಂಚು, ರವಿಚಂದ್ರ ಬಾಲೆಹೊಸೂರ, 25ಮೀ. ಸ್ಟಾ್ಯಂಡರ್ಡ್ ಪಿಸ್ತೂಲ್ ಎನ್ಆರ್ ನಲ್ಲಿ ಬೆಳ್ಳಿ, ಐಶ್ವರ್ಯ ಬಾಲೆಹೊಸೂರ 50ಮೀ. ಫ್ರೀ ಪಿಸ್ತೂಲ್ ಐಎಸ್ಎಸ್ಎಫ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಜಯಶ್ರೀ ಪಾಟೀಲ 50ಮೀ. ಫ್ರೀ ಪಿಸ್ತೂಲ್ ಎನ್ಆರ್ ಮಾಸ್ಟರ್ನಲ್ಲಿ ಬೆಳ್ಳಿ, ಮೊಹಮ್ಮದ ಅಜ್ಮಲ್ 25ಮೀ. ಸೆಂಟರ್ ಫೈರ್ ಪಿಸ್ತೂಲ್ನಲ್ಲಿ ಬೆಳ್ಳಿ, ಮೊಹಮ್ಮದ ಹುಸೇನ ನಾಯಕ 10ಮೀ. ಏರ್ ಪಿಸ್ತೂಲ ಎನ್ಆರ್ ಕಿವುಡರ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
10 ಮೀ. ಏರ್ ರೈಫಲ್ ಐಎಸ್ಎಸ್ಎಫ್ ಪುರುಷರ ತಂಡ ವಿಭಾಗದಲ್ಲಿ ಹರ್ಷ ಭದ್ರಾಪುರ, ಆದರ್ಶ ನಿಕಂ, ಶ್ರೀಕರ ಸಬನಿಸ್ ಸೇರಿ 2 ಚಿನ್ನ ಹಾಗೂ 1 ಬೆಳ್ಳಿ ಹಾಗೂ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಎನ್ಆರ್ ಯುಥ್ ತಂಡ ವಿಭಾಗದಲ್ಲಿ ವೇದಾವತಿ, ಗೌರಿ ಕೊಚ್ಚಲಾಪುರಮಠ, ಮಿಂಜಿರಿ ಸೇರಿ ಬೆಳ್ಳಿ ಪದಕ ಜಯಿಸಿದ್ದಾರೆ.
ಇವರೆಲ್ಲರೂ ರಾಷ್ಟ್ರ ಮಟ್ಟದ ಶೂಟರ್, ಮಾಜಿ ಸೈನಿಕ ರವಿಚಂದ್ರ ಬಾಲೆಹೊಸೂರ ಅವರಲ್ಲಿ ತರಬೇತಿ ಪಡೆದಿದ್ದಾರೆ.