

ಹುಬ್ಬಳ್ಳಿ: ಗೋವಾದಲ್ಲಿ ಇತ್ತೀಚೆಗೆ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಇಂಡಿಯಾ ಓಪನ್ (ರೈಫಲ್/ಪಿಸ್ತೂಲ್) ಶೂಟಿಂಗ್ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಶೂಟಿಂಗ್ ಆಕಾಡೆಮಿಯ ಶೂಟರ್ಗಳು 2 ಚಿನ್ನ ಸೇರಿ 6 ಪದಕಗಳನ್ನು ಜಯಿಸಿದ್ದಾರೆ.
ಎನ್ಆರ್ ರೈಫಲ್ ವಿಭಾಗದ 50 ಮೀಟರ್ ಪ್ರೋನ್ನಲ್ಲಿ ಪ್ಯಾರಾ ಶೂಟರ್ಗಳಾದ ಶಂಕರಲಿಂಗ ಟವಳಿ ಚಿನ್ನ ಹಾಗೂ 10ಮೀ. ಸ್ಟ್ಯಾಂಡಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಸಚಿನ್ ಸಿದ್ದಣ್ಣವರ 10ಮೀ. ಸ್ಟಾ್ಯಂಡಿಂಗ್ನಲ್ಲಿ ಚಿನ್ನ ಹಾಗೂ 50 ಮೀ. ಪ್ರೋನ್ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಪಿಸ್ತೂಲ್ (ಐಎಸ್ಎಸ್ಎಫ್) ಮಹಿಳಾ ಯೂತ್ ವಿಭಾಗದ 10 ಮೀ. ನಲ್ಲಿ ಐಶ್ವರ್ಯ ಬಾಳೆಹೊಸೂರ್ ಬೆಳ್ಳಿ, ಹಾಗೂ 50 ಮೀ. ಮಾಸ್ಟರ್ ಪ್ರಿ ಪಿಸ್ತೂಲ್ನಲ್ಲಿ ಜಯಶ್ರೀ ಪಾಟೀಲ ಕಂಚಿನ ಪದಕಗಳಿಸಿದ್ದಾರೆ. ಅಕಾಡೆಮಿಯ ಮುಖ್ಯ ಕೋಚ್ ರವಿಚಂದ್ರ ಬಾಲೇಹೊಸೂರ್ ತಮ್ಮ ಶೂಟರ್ಗಳ ಸಾಧನೆಗೆ ಹರ್ಷವ್ಯಕ್ತಪಡಿಸಿದ್ದಾರೆ.