ಸಿಎಂ ಕಪ್ ಶೂಟಿಂಗ್​ನಲ್ಲಿ 4 ಪದಕ

hubballo shooters
Published on

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಆಯೋಜಿಸಿದ್ದ ದಸರಾ ಸಿಎಂ ಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಶೂಟರ್​ಗಳು ನಾಲ್ಕು ಪದಕಗಳನ್ನು ಜಯಿಸಿದ್ದಾರೆ.

10 ಮೀಟರ್ ಏರ್ ಪಿಸ್ತೂಲ್ ಪುರುಷರ ವಿಭಾಗದಲ್ಲಿ ಸಿದ್ದಾರ್ಥ ದಿವಟೆ ಚಿನ್ನದ ಪದಕ ಗೆದ್ದಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ತಂಡದ ವಿಭಾಗದಲ್ಲಿ ಐಶ್ವರ್ಯ ಬಾಲೆಹೊಸೂರ ಬೆಳ್ಳಿ ಹಾಗೂ ಪುರುಷರ ತಂಡದ ವಿಭಾಗದಲ್ಲಿ ಜಾಕೋಬ್ ಲಿಂಕನ್ ಕಂಚಿನ ಪದಕ, 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಶ್ರೀಕರ ಸಬನಿಸ್ ಕಂಚಿನ ಪದಕ ಜಯಿಸಿದರು.

ಈ ಶೂಟರ್​ಗಳು ಅಕಾಡೆಮಿಯ ರವಿಚಂದ್ರ ಬಾಲೆಹೊಸೂರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net