

ಹುಬ್ಬಳ್ಳಿ: ಯುಎಇ ನಲ್ಲಿ ಅ. 25ರಿಂದ ನವೆಂಬರ್ 4ರವರೆಗೆ ನಡೆಯಲಿರುವ ಡಬ್ಲ್ಯುಎಸ್ಪಿಎಸ್ ಪ್ಯಾರಾ ಶೂಟಿಂಗ್ ವಿಶ್ವಕಪ್ನಲ್ಲಿ ಹುಬ್ಬಳ್ಳಿ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿ ಶೂಟರ್ ರಾಕೇಶ್ ನಿಡಗುಂದಿ ಸ್ಪರ್ಧಿಸಲಿದ್ದಾರೆ.
ಈಗಾಗಲೇ ಭಾರತ ಮತ್ತು ಜಪಾನ್ನಲ್ಲಿ ನಡೆದ ವಿಶ್ವ ಕಪ್ನಲ್ಲಿ ಕೂಡ ಭಾಗವಹಿಸಿರುವ ರಾಕೇಶ ಇದೀಗ ಮೂರನೇ ಬಾರಿ ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅವರು ಆರ್1 10ಮೀಟರ್ ಏರ್ ರೈಫಲ್ ಹಾಗೂ ಆರ್7 50 ಮೀಟರ್ 3ಪೋಜಿಸನ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ರಾಕೇಶ ಅವರು ಕಳೆದ ಎರಡು ವರ್ಷದಿಂದ ದೆಹಲಿಯ ಸಾಯಿ ಎಕ್ಸಲೆಂಟ್ ಸೆಂಟರ್ನಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ ಎಂದು ಹುಬ್ಬಳ್ಳಿ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿ ತರಬೇತುದಾರ ರವಿಚಂದ್ರ ಬಾಳೆಹೊಸೂರ ತಿಳಿಸಿದ್ದಾರೆ.