

ಹುಬ್ಬಳ್ಳಿ: ಮೂರುಸಾವಿರಮಠ ಮಹಾಸಂಸ್ಥಾನದ ಪರಂಪರೆಯಾಗಿ ಹಿಂದು-ಮುಸ್ಲಿಮರು ಕೂಡಿ ಕುತುಬ್-ಇ-ರಂಜಾನ್ ಹಬ್ಬ ಆಚರಿಸಲಾಗುತ್ತಿದೆ. ಇದು ಇತರರಿಗೂ ಮಾದರಿಯಾಗಿದ್ದು, ಏಕತೆ, ಪ್ರೀತಿ, ಮಾನವೀಯತೆಯಾಗಿದೆ ಎಂದು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಾಮೂಹಿಕ ಪ್ರಾರ್ಥನೆ ನಂತರ ಇಲ್ಲಿಯ ಮೂರುಸಾವಿರ ಮಠಕ್ಕೆ ಸೋಮವಾರ ತೆರಳಿದ ಮುಸ್ಲಿಮರು, ಪ್ರತಿಯೊಬ್ಬರೂ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಪೂಜ್ಯರ ಆಶೀರ್ವಾದ ಪಡೆದ ನಂತರ ಶ್ರೀಗಳು ಮಾತನಾಡಿದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿ ಮಹಾನಿಂಗ ನಂದಗಾಂವಿ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಯುಸೂಫ ಸವಣೂರ, ವಿಜಯಕುಮಾರ ಶೆಟ್ಟರ್, ಮಲ್ಲಿಕಾರ್ಜುನ ಕಳಸರಾಯ, ಅಹ್ಮದ ಕುಡಚಿವಾಲೆ, ಚನ್ನಬಸಪ್ಪ ಧಾರವಾಡಶೆಟ್ಟರ, ಅಲ್ತಾಫ್ ಹುಸೇನ್ ಹಳ್ಳೂರ, ಅಪ್ಪಣ್ಣ ಬೆಂಡಿಗೇರಿ, ಶಾರುಖ್ ಮುಲ್ಲಾ, ಎಂ.ಎಸ್. ಇರಗಣ್ಣವರ, ಸಿಖಂದರ ಕುಮಟಾಕರ, ಇತರರು ಉಪಸ್ಥಿತರಿದ್ದರು.