ಯುಗಳ ಗೀತೆಗೆ ಮನಸೋತ ಹುಬ್ಬಳ್ಳಿಗರು

h8-Eeshwari Foundation 1
Published on

ಹುಬ್ಬಳ್ಳಿ: ಗಾನಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಒಂದೊಂದು ಗೀತೆ ಪ್ರಸಿದ್ಧ. ಇಂಥ ಗೀತೆಗಳಿಗೆ ಹುಬ್ಬಳ್ಳಿಗರು ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಸಾಕ್ಷಿಯಾದರು.
ಈಶ್ವರಿ ಫೌಂಡೇಷನ್ ವತಿಯಿಂದ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸ್ಮರಣೆಯ ‘ಸವಿಗಾನ’ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಕುಮಾರ, ಐಶ್ವರ್ಯ, ಸಂತೋಷ, ರವೀಂದ್ರ ರಾಮದುರ್ಗಕರ, ಅರ್ಪಿತಾ ಜಹಾಗೀರದಾರ ಇತರರು, ಎಸ್‌ಪಿಬಿ ಅವರ ಹಾಡುಗಳನ್ನು ಹಾಡಿ ಜನರನ್ನು ಹಿಡಿದಿಟ್ಟುಕೊಂಡರು. ಶಾಸಕ ಮಹೇಶ ಟೆಂಗಿನಕಾಯಿ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ. ಅವರು ಕೂಡ ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಎಸ್‌ಪಿಬಿ ಅವರ ಹಾಡುಗಳು ಜನಮಾನಸದಲ್ಲಿ ಉಳಿದಿವೆ. ಅವರ ಸಾಧನೆಯನ್ನು ಈಶ್ವರಿ ಫೌಂಡೇಷನ್ ವತಿಯಿಂದ ಜನರಿಗೆ ಮುಟ್ಟಿಸಲಾಗುತ್ತಿದೆ. ಇದು ಶ್ಲಾಘನೀಯ ಎಂದರು.
ಎಂಎಲ್‌ಸಿ ಪ್ರದೀಪ ಶೆಟ್ಟರ್ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಬಹಳಷ್ಟು ಕಲಾವಿದರು ಇದ್ದಾರೆ. ಅವರಿಗೆ ವೇದಿಕೆ ಸಿಕ್ಕರೆ ದೇಶವ್ಯಾಪಿ ಹೆಸರು ಗಳಿಸಲಿದ್ದಾರೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ. ಮಾತನಾಡಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಶುಭಹಾರೈಸಿ ಬರೆದ ಪತ್ರವನ್ನು ನಿರೂಪಕಿ ಗೌರಿ ಓದಿದರು.
ಫೌಂಡೇಷನ್ ಅಧ್ಯಕ್ಷ ಸಂತೋಷ ವೆರ್ಣೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿಗಳಾದ ರಮೇಶ ಮಹಾದೇವಪ್ಪನವರ, ಗಣೇಶ ಮಳಲೀಕರ, ಸಂತೋಷ ಶೆಟ್ಟಿ, ವಕೀಲ ಗುರು ಹಿರೇಮಠ ಇತರರು ಇದ್ದರು. ಪತ್ರಕರ್ತ ವೀರೇಶ ಹಂಡಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net