

ಹುಬ್ಬಳ್ಳಿ: ದೆಹಲಿಯ ಡಾ. ಕರ್ಣಿಸಿಂಗ್ ಶೂಟಿಂಗ್ ರೇಂಜ್ನಲ್ಲಿ ಮಾರ್ಚ್ 6ರಿಂದ 16ರವರೆಗೆ ನಡೆಯಲಿರುವ ಪ್ಯಾರಾ ಶ್ಯೂಟಿಂಗ್ ವಿಶ್ವಕಪ್ಗೆ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಮೂವರು ಶೂಟರ್ಗಳು ಆಯ್ಕೆಯಾಗಿದ್ದಾರೆ.
50 ಮೀಟರ್ ಪ್ರೋನ್ ಮತ್ತು 3 ಪೊಸಿಷನ್ ವಿಭಾಗದಲ್ಲಿ ರಾಕೇಶ ನಿಡಗುಂದಿ, 50 ಮೀ. ಪ್ರೋನ್ ಮತ್ತು 10 ಮೀ. ಏರ್ ರೈಫಲ್ ವಿಭಾಗದಲ್ಲಿ ಜ್ಯೋತಿ ಸಣ್ಣಕ್ಕಿ, 10 ಮೀ. ಏರ್ ರೈಫಲ್ ಸ್ಟ್ಯಾಂಡಿಂಗ್ ವಿಭಾಗದಲ್ಲಿ ಶಂಕರಲಿಂಗ ಟವಳಿ ಆಯ್ಕೆಯಾಗಿದ್ದಾರೆ. 2024ರ ಪ್ಯಾರಿಸ್ ಪ್ಯಾರಾ ಒಲಿಂಪಿಕ್ಸ್ಗೆ ಆಯ್ಕೆಯಾಗಲು ಇದೊಂದು ಉತ್ತಮ ಅವಕಾಶವಾಗಿದೆ. ಇವರಿಗೆ ಮಾಜಿ ಸೈನಿಕ ರವಿಚಂದ್ರ ಬಾಲೇಹೊಸೂರ್ ತರಬೇತಿ ನೀಡುತ್ತಿದ್ದಾರೆ.
ಪ್ರಥಮ ಬಾರಿಗೆ ಭಾರತದಲ್ಲಿ ಪ್ಯಾರಾ ಒಲಿಂಪಿಕ್ ಆಫ್ ಇಂಡಿಯಾದ ನೇತೃತ್ವದಲ್ಲಿ ಪ್ಯಾರಾ ಶ್ಯೂಟಿಂಗ್ ವಿಶ್ವಕಪ್ ಆಯೋಜಿಸಲಾಗಿದೆ.