ಫಾಲ್ಕೆ ಇಂಡಿಯನ್ ಟೆಲಿವಿಷನ್ ಆವಾರ್ಡ್

priyanka kolvekar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಪ್ರಿಯಾಂಕಾ ಕೊಳವೇಕರ 2024ರ ಪ್ರತಿಷ್ಠಿತ ದಾದಾ ಸಾಹೇಬ ಫಾಲ್ಕೆ ಇಂಡಿಯನ್ ಟೆಲಿವಿಷನ್ ಅವಾರ್ಡ್​ಗೆ ಪಾತ್ರರಾಗಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಟಿ ದೀಪಿಕಾ ಚಿಖಲಿಯಾ (ರಾಮಾಯಣ ಧಾರಾವಾಹಿಯ ಸೀತಾ ಪಾತ್ರಧಾರಿ) ಪ್ರಶಸ್ತಿ ಪ್ರದಾನ ಮಾಡಿದರು. ಫ್ಯಾಷನ್ ಮಾಡೆಲ್ ಹಾಗೂ ಪ್ರಾಣಿ ದಯಾ ಕಾರ್ಯಕರ್ತೆ ವಿಭಾಗದಲ್ಲಿ ಪ್ರಿಯಾಂಕಾ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಪ್ರಿಯಾಂಕಾ ಅವರು, ಪ್ರಾಣಿ ಕಲ್ಯಾಣ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಡಬ್ಲ್ಯುಬಿಐ ನಲ್ಲಿ ಪ್ರಾಣಿ ಕಲ್ಯಾಣ ಅಧಿಕಾರಿಯಾಗಿರುವ ಅವರು, ಪ್ರಾಣಿಗಳ ಹಕ್ಕು ಹಾಗೂ ಯೋಗಕ್ಷೇಮಕ್ಕಾಗಿ ಶ್ರಮಿಸುತ್ತಿದ್ದಾರೆ. 2022ರಲ್ಲಿ ಭಾರತ ಟಾಪ್ ಮಾಡೆಲ್ ಆಗಿ ಗುರುತಿಸಿಕೊಂಡ ಮೊದಲ ಸಸ್ಯಾಹಾರಿ ಆಗಿದ್ದರು. ಪೀಪಲ್ ಫಾರ್ ಅನಿಮಲ್ಸ್, ಡಬ್ಲ್ಯುವಿಎಸ್ ಹಿಕ್ಸ್ ಇಂಟರನ್ಯಾಷನಲ್, ಅನಿಮಲ್ ಆಡ್ ಅನ್​ಲಿಮಿಟೆಡ್ ನಂಥ ಹೆಸರಾಂತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net