

ಹುಬ್ಬಳಿ: ಧಿಟ್ಟ ಹೋರಾಟಗಾರ್ತಿ, ಬ್ರಿಟಿಷರ ಬೆವರಿಳಿಸಿದ ಕಿತ್ತೂರು ರಾಣಿ ಚನ್ನಮ್ಮಳ ನಾಡಿನಲ್ಲಿ ಜನಿಸಿದ ನಾವೇ ಪುಣ್ಯವಂತರು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.</p><p>ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಹುಬ್ಬಳ್ಳಿ ವಿಶ್ವ ಕನ್ನಡ ಬಳಗದ ವತಿಯಿಂದ ಬುಧವಾರ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮಳ ವಿಜಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೀರರಾಣಿ ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಮೊದಲ ಜಯ ಗಳಿಸಿ ಇಂದಿಗೆ 200 ವರ್ಷ ಪೂರೈಸಿದೆ. ಚನ್ಮಮ್ಮಳ ಹೋರಾಟದ ಮನೋಭಾವ ನಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ ಎಂದರು.
ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ಕಾಮಗಾರಿ ಮುಗಿದ ಬಳಿಕ ವೃತ್ತದಲ್ಲಿರುವ ಚನ್ನಮ್ಮಳ ಮೂರ್ತಿಯನ್ನು ಎತ್ತರದಲ್ಲಿ ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಬೇಕು. ಹು-ಧಾ ಮಹಾನಗರ ಪಾಲಿಕೆ ಈ ಕುರಿತು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕು. ಸದನದಲ್ಲಿ ಈ ಕುರಿತು ರ್ಚಚಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಮೇಯರ್ ರಾಮಣ್ಣ ಬಡಿಗೇರ ಮಾತನಾಡಿ, ಚನ್ನಮ್ಮ ಸರ್ಕಲ್ನಲ್ಲಿರುವ ಚನ್ನಮ್ಳ ಮೂರ್ತಿ ಎತ್ತರದಲ್ಲಿ ಪ್ರತಿಷ್ಠಾಪನೆ ಸಂಬಂಧ ರ್ಚಚಿಸಲು ನವೆಂಬರ್ 18ರಂದು ಪಾಲಿಕೆಯಲ್ಲಿ ಜನಪ್ರತಿನಿಧಿಗಳು, ಅಭಿಮಾನಿಗಳ ಸಭೆ ಕರೆಯಲಾಗುವುದು. ಎಲ್ಲರ ಸಲಹೆ ಪಡೆದು ನಿರ್ಣಯ ಕೈಗೊಂಡು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮಹತ್ವದ ಪಾತ್ರ ವಹಿಸಿದ್ದಾರೆ. ನಾಡಿನ ಜನರ ಏಳಿಗೆಗಾಗಿ ಜೀವದ ಹಂಗು ತೊರೆದು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಚನ್ನಮ್ಮಳ ವ್ಯಕ್ತಿತ್ವವವನ್ನು ಎಲ್ಲ ಮಹಿಳೆಯರೂ ಪಾಲಿಸಲಿ. ತಮ್ಮ ಮಕ್ಕಳಿಗೆ ಚನ್ನಮ್ಮ ಎಂದು ಹೆಸರಿಡಲಿ ಎಂದರು.
ಉಪಮಹಾಪೌರರಾದ ದುರ್ಗಮ್ಮ ಬಿಜವಾಡ, ಸದಸ್ಯ ರಾಜಣ್ಣ ಕೊರವಿ ಮಾತನಾಡಿದರು. ವಿಶ್ವ ಕನ್ನಡ ಬಳಗದ ಸಂಸ್ಥಾಪಕ ಅಧ್ಯಕ್ಷ ಸದಾಶಿವ ಚೌಶೆಟ್ಟಿ, ಉಪಾಧ್ಯಕ್ಷ ಪ್ರಸನ್ನ ಕುಲಕರ್ಣಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿದರು.
ಸಮಾಜ ಸೇವಕ ಡಾ. ರಮೇಶ ಮಹೇವಪ್ಪನವರು, ಸಂತೋಷ ವೆರ್ಣೆಕರ, ವೆಂಕಟೇಶ ಕಾಟವೆ, ತಾರಾದೇವಿ ವಾಲಿ, ಡಾ. ಸುವರ್ಣಲತಾ ಗದಿಗೆಪ್ಪಗೌಡರ, ದತ್ತುಸಾಕಲಬಜುರ್ಗಿ, ಶಂಕರ ಪಾಟೀಲ, ಅಮಿತ ಮಹಾಜನ, ಎನ್.ಎಸ್. ಕಿರಣ, ದೀಪಕ ಗುಡ್ಡದಕೇರಿ, ಶಂಕರ ಮಿಸ್ಕಿನ, ಎಸಿಪಿ ಶಿವಪ್ರಕಾಶ ನಾಯ್ಕ, ಇತರಿದ್ದರು. ರತ್ನಮ್ಮ ಚೌಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.