ರಾಜ್ಯ ಮಟ್ಟದ ಕರಾಟೆಯಲ್ಲಿ ಉತ್ತಮ ಸಾಧನೆ

karate state level
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಧಾರವಾಡ ಜಿಲ್ಲೆಯ ಕರಾಟೆ ಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿ ಸಾತ್ವಿಕ್ ಎಚ್., ತೇಜಸ್ ಟಿ., ಯಶಸ್ ಎಸ್., ಶ್ರದ್ಧಾ ಜೆ., ಅಗಸ್ಱಾ ಎಸ್., ಅಭಿಷೇಕ ಕೆ., ರುಹಿ ಪಿ., ಪಿಯೂಸ್ ಎಂ., ಸುಮಾ ಬಿ., ತೃಷ್ಟಿ ಪಟೇಲ, ಪ್ರಜ್ವಲ ದೇವಕ್ಕಿ, ಅನನ್ಯಾ ಎಂ., ಶಿವಾಂಕ ಬಿ. ಬಂಗಾರದ ಪದಕ ಜಯಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ತಂಡ ವಿಭಾಗದಲ್ಲಿ ಪ್ರಜ್ವಲ್, ವೇದಾಂತ ಹಾಗೂ ಶ್ರೀಜನ್ ಮತ್ತು ಬಾಲಕಿಯರ ವಿಭಾಗದಲ್ಲಿ ತೃಷ್ಟಿ ಪಟೇಲ, ಪ್ರಾರ್ಥನಾ ಹಾಗೂ ಶ್ರದ್ಧಾ ಚಿನ್ನದ ಪದಕ ಗೆದ್ದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿ ಗಗನ ಎಚ್., ಇಶಿತಾ ಕೆ., ಸೋಹಂ ಜಿ., ಪುನೀತ ಡಬ್ಲ್ಯು., ಮನೀಷ ಬಿ., ತ್ರಿಷಿಕಾ ಎಸ್., ನಿಶ್ಚಯ ಡಿ., ಯಶಸ್ ಎಸ್., ದಿಯಾ ಎಸ್., ಆಧ್ಯಾ ಜಿ., ವರ್ಷಾ ಬಿ. ಹಾಗೂ ಬಾಲಕರ ತಂಡ ವಿಭಾಗದಲ್ಲಿ ಅಗಸ್ಱಾ ಎಸ್., ಅಭಿಷೇಕ ಕೆ. ಹಾಗೂ ಮಹೇಶ ಡಿ. ಬೆಳ್ಳಿ ಪದಕ ಜಯಿಸಿದ್ದಾರೆ.

ತೈಫ್ ಎನ್., ರಿತೇಶ, ಮಹೇಶ ಡಿ., ಆಯುಶರಾಜ್, ತ್ರೖೆಪೋಸಾ ಬಿ., ಅಗಸ್ಱಾ ಎಸ್., ಗ್ರಂಥ ಡಿ., ಡಿಯಾ ಎಸ್., ವಿವೇಕ ಎಸ್., ಸಬರೀಶ ಎ. ಹಾಗೂ ಸುದೀಕ್ಷಾ ಜಿ. ಕಂಚಿನ ಪದಕ ಗೆದ್ದಿದ್ದಾರೆ.

ಕೋಚ್​ಗಳಾದ ಶರತ್ ಸಾಕೀನ್, ಸಿದ್ದು, ಗಣೇಶ, ಖುಷ್ಬೂ ಜೈನ್, ಅಭಿಷೇಕ ತೋಟಗಿ, ಗುರುಪ್ರಸಾದ, ಆನಂದ ಮರ್ಕಲ್ ತರಬೇತಿ ನೀಡಿದ್ದರು. ಡಿಸೆಂಬರ್ 12ರಿಂದ 15ರವರೆಗೆ ದೆಹಲಿಯಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net