

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ದಾವಣಗೆರೆಯಲ್ಲಿ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಭಾನುವಾರ ಆಯೋಜಿಸಿದ್ದ ದಾವಣಗೆರೆ ಬೆಣ್ಣೆ ನಗರಿ ಕಪ್-ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ಹುಬ್ಬಳ್ಳಿಯ ಕರಾಟೆಪಟುಗಳು 70 ಪದಕಗಳನ್ನು ಗೆದ್ದು ಮಿಂಚಿದ್ದಾರೆ.
ನವನಗರ, ಸತ್ತೂರು, ಸುತಗಟ್ಟಿ, ಕೇಶ್ವಾಪುರ ಭಾಗದ ಕರಾಟೆ ಶಾಲೆಯ 43 ವಿದ್ಯಾರ್ಥಿಗಳು ಭಾಗವಹಿಸಿ ಕಾಟಾ ಮತ್ತು ಕುಮಿಟೆ ವಿಭಾಗದಲ್ಲಿ ಒಟ್ಟು 16 ಚಿನ್ನ, 23 ಬೆಳ್ಳಿ ಹಾಗೂ 31 ಕಂಚಿನ ಪದಕಗಳನ್ನು ಜಯಿಸಿದ್ದಾರೆ.
ಕರಾಟೆ ತರಬೇತುದಾರರಾದ ವಿಶ್ವನಾಥ ಕುಡತರಕರ, ಲೋಕೇಶ, ವಿರೂಪಣ್ಣ, ಅನಿಕೇತ, ಮಲ್ಲಿಕಾರ್ಜುನ, ಯಶಸ್ವಿನಿ, ತೇಜಸ್ ಹಾಗೂ ಅಣ್ಣಪ್ಪ ಮಾರ್ಕೆಲ್ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.