ನಯನಾ ವಡಗಾವಿ ರಂಗಪ್ರವೇಶ ಅ. 20 ರಂದು

1-NAYANA
Published on

ಹುಬ್ಬಳ್ಳಿ: ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಅ. 20ರಂದು ಸಂಜೆ 5.30ಕ್ಕೆ ಕುಮಾರಿ ನಯನಾ ವಡಗಾವಿ ಅವರ ರಂಗಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾ ಸುಜಯ ಮ್ಯಾನೇಜಿಂಗ್ ಟ್ರಸ್ಟಿ ಸುಜಯ ಶಾನಭಾಗ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಯನಾ ವಡಗಾವಿ ಅವರು ಸುಜಯ ಶಾನಭಾಗ ನಿರ್ದೇಶನದಲ್ಲಿ ಭರತನಾಟ್ಯ ಮಾರ್ಗಂ ಪದ್ಧತಿಯಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಭಾರತೀಯ ಶಾಸ್ತ್ರೀಯ ಕಲೆಗಳ ಉಳಿವು-ಬೆಳವಣಿಗೆಗೆ ಕಲಾ ಸುಜಯ ಶ್ರಮಿಸುತ್ತಿದೆ. ಈ ವರ್ಷ ದಶಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದೆ. ಕಾರ್ಯಕ್ರಮದಲ್ಲಿ ಮೈಸೂರಿನ ವಿದುಷಿ ಶಕುಂತಲಾ ಹನುಮಂತಪ್ಪ, ಯಾಮಿನಿ ಮುತ್ತಣ್ಣ, ರೇಖಾ ಹೆಗಡೆ, ಕಮಲಾ ಜೋಶಿ ಇತರರು ಭಾಗವಹಿಸಲಿದ್ದಾರೆ ಕಲಾ ಸುಜಯ ಟ್ರಸ್ಟಿ ಜೆ.ಎಲ್. ಶಾನಭಾಗ, ಸವಿತಾ ವಡಗಾವಿ, ವೆಂಕಟೇಶ ವಡಗಾವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net