ಹುಬ್ಬಳ್ಳಿ ಜಗ್ಗಲಗಿ ಹಬ್ಬ ಮಾ. 16ಕ್ಕೆ

New jaggalagi Habba
Published on

ಹುಬ್ಬಳ್ಳಿ : ಹೋಳಿ ಹಬ್ಬದ ಅಂಗವಾಗಿ ನಗರದಲ್ಲಿ ಪ್ರತಿ ವರ್ಷ ಆಯೋಜಿಸಿಕೊಂಡು ಬಂದಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬದ 12ನೇ ವರ್ಷದ ಆಚರಣೆಯ ಪೂರ್ವಭಾವಿ ಸಭೆಯನ್ನು ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಶುಕ್ರವಾರ ಏರ್ಪಡಿಸಲಾಗಿತ್ತು.

ಸಭೆಯ ನೇತೃತ್ವ ವಹಿಸಿದ್ದ ಜಗ್ಗಲಗಿ ಹಬ್ಬದ ಆಯೋಜಕರಾದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಮಾರ್ಚ್ 16 ರಂದು ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಹಮ್ಮಿಕೊಳ್ಳಲು ತೀರ್ವನಿಸಲಾಗಿದೆ ಎಂದು ತಿಳಿಸಿದರು.

ಕಳೆದ 11 ವರ್ಷಗಳಿಂದ ಆಚರಿಸುತ್ತಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಇಡೀ ರಾಜ್ಯದ ಗಮನ ಸೆಳೆದಿದೆ. ಮಹಾಕುಂಭ ಮೇಳದಂತೆ ಹುಬ್ಬಳ್ಳಿ ಜಗ್ಗಲಗಿ ಹಬ್ಬವೂ ಪ್ರಸಿದ್ಧಿ ಪಡೆಯಲಿ. ಹಿಂದು ಸಮಾಜವನ್ನು ಒಗ್ಗೂಡಿಸುವ ಕೆಲಸ ಈ ಹಬ್ಬದಿಂದ ಆಗುತ್ತಿದೆ. 35ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳುವರು ಎಂದರು.

ಜಗ್ಗಲಗಿ ಹಬ್ಬ ಕೇವಲ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೇ, ಇಡೀ ದೇಶದಾದ್ಯಂತ ಪ್ರಸಿದ್ಧಿ ಪಡೆಯಲಿ ಎಂದು ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ ಹೇಳಿದರು.

ನಾರಾಯಣ ಜರತಾರಘರ ಮಾತನಾಡಿ, ಹುಬ್ಬಳ್ಳಿಯಲ್ಲಿ ಹೋಳಿ ಹಬ್ಬದ ಸಮಯದಲ್ಲಿ ಮಹೇಶ ಟೆಂಗಿನಕಾಯಿ ಅವರು ಜಗ್ಗಲಗಿ ಹಬ್ಬ ಪ್ರಾರಂಭಿಸಿದರು. ಈ ಬಾರಿ ಜಗ್ಗಲಗಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕಿದೆ ಎಂದರು.

ಬಿಜೆಪಿ ಪೂರ್ವ ಕ್ಷೇತ್ರದ ಅಧ್ಯಕ್ಷ ಮಂಜುನಾಥ ಕಾಟಕರ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಚಂದ್ರಿಕಾ ಮೇಸ್ತ್ರಿ, ಶಿವು ಮೆಣಸಿನಕಾಯಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಸುಭಾಷಸಿಂಗ್ ಜಮಾದಾರ, ಪ್ರಭು ನವಲಗುಂದಮಠ, ಪ್ರವೀಣ ಪವಾರ, ಜಗದೀಶ ಬುಳ್ಳಾನವರ, ಅನುರಾದ ಚಿಲ್ಲಾಳ, ಅಕ್ಕಮ್ಮ ಹೆಗಡೆ, ಸಂತೋಷ ಅರಕೇರಿ, ವೆಂಕಟೇಶ ಕಾಟವೆ, ಪ್ರಕಾಶ ಬುರಬುರೆ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net