ಹುಬ್ಬಳ್ಳಿ ಹುಡುಗಿ ತ್ರಿಷಾಗೆ ಅಂತಾರಾಷ್ಟ್ರೀಯ ಪದಕ

h27-trisha jadala
Published on

ಹುಬ್ಬಳ್ಳಿ: ಹುಬ್ಬಳ್ಳಿ ಹುಡುಗಿ ತ್ರಿಷಾ ಪ್ರವೀಣ ಜಡಲಾ ಅವರು ಏಷಿಯನ್ ಚಾಂಪಿಯನ್‌ಶಿಪ್ 2025ರ ರೋಲರ್ ಡರ್ಬಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಇಲ್ಲಿಯ ಕೆಎಲ್‌ಇ ಜೆ.ಜಿ. ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿ ತ್ರಿಷಾ, ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಕ್ಲಬ್‌ನ ಆಟಗಾರ್ತಿ. ಬೆಳ್ಳಿ ಗೆಲ್ಲುವ ಮೂಲಕ ಗ್ಲೋಬಲ್ ಮಟ್ಟದಲ್ಲಿ ಹುಬ್ಬಳ್ಳಿ, ರಾಜ್ಯ ಮತ್ತು ರಾಷ್ಟ್ರಕ್ಕೆ ಗೌರವ ತಂದಿದ್ದಾರೆ. ಸಾಧನೆಗೆ ವಿಆರ್‌ಎಲ್ ಗ್ರೂಪ್ ಮತ್ತು ಸ್ವರ್ಣ ಗ್ರೂಪ್ ಬೆನ್ನೆಲುವಾಗಿ ನಿಂತಿದೆ ಎಂದು ತ್ರಿಷಾ ಸ್ಮರಿಸಿ, ಧನ್ಯವಾದ ಅರ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net