

ಹುಬ್ಬಳ್ಳಿ: ಹು-ಧಾ ಪೊಲೀಸ್ ಆಯುಕ್ತರನ್ನಾಗಿ ರೇಣುಕಾ ಸುಕುಮಾರ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಈ ಹಿಂದೆ ಅವರು ಹು-ಧಾ ಪೊಲೀಸ್ ಆಯುಕ್ತಾಲಯದಲ್ಲಿ 2018ರಲ್ಲಿ ಡಿಸಿಪಿಯಾಗಿ (ಕಾನೂನು ಮತ್ತು ಸುವ್ಯವಸ್ಥೆ) ಕರ್ತವ್ಯ ನಿರ್ವಹಿಸಿದ್ದರು. ಪ್ರಭಾರಿ ಆಯುಕ್ತರಾಗಿದ್ದ ಕೆ. ಸಂತೋಷ್ ಬಾಬು ಅವರ ಸ್ಥಳಕ್ಕೆ ರೇಣುಕಾ ಸುಕುಮಾರ ಅವರಿನ್ನು ಕಾಯಂ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
2011ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಇವರು, ಪ್ರಸ್ತುತ ಡೆಪ್ಯುಟಿ ಕಮಾಂಡೆಂಟ್ ಜನರಲ್, ಗೃಹ ರಕ್ಷಕರು ಮತ್ತು ಸಿವಿಲ್ ಡಿಫೆನ್ಸ್ನ ಪದನಿಮಿತ್ತ ಉಪ ನಿರ್ದೇಶಕರಾಗಿದ್ದರು. ಈಗ ಹು-ಧಾ ಪೊಲೀಸ್ ಆಯಕ್ತಾಲಯದ ಮೊದಲ ಮಹಿಳಾ ಕಮೀಷನರ್ ಆಗಲಿದ್ದಾರೆ.