ಹುಬ್ಬಳ್ಳಿ: ಭಾವ ಸಂಗಮ ಹವ್ಯಾಸಿ ತಂಡದಿಂದ ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವದ ಅಂಗವಾಗಿ ಜ.18ರಂದು ಸಂಜೆ 5.30ಕ್ಕೆ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಹಾಲು- ಜೇನು 6.0 ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ನರಸಾಪುರ, ಸಿತಾರ್ ವಾದಕ, ಹಿಂದುಸ್ತಾನಿ ಗಾಯಕ ಶ್ರೀನಿವಾಸ ಜೋಶಿ, ಇತರ ಗಣ್ಯರು ಭಾಗವಹಿಸಲಿದ್ದಾರೆ. ಕಲಾವಿದರಾದ ಡಾ.ಸುನೀಲ ಗಾಯದ, ಡಾ.ಮಂಜುನಾಥ ದಂಡಿ, ಡಾ.ದತ್ತಾ ನಾಡಿಗೇರ, ಡಾ.ಸೋಮಶೇಖರ ಕಡೂರ, ಡಾ.ವೆಂಕಟೇಶ ಮೊಗೇರ, ಗಗನ ಪಾಟೀಲ, ಡಾ.ಸುಪ್ರಿಯಾ ಬನ್ನಿಕೋಡ, ಡಾ.ರಶ್ಮಿ ಪಾಟೀಲ, ರಾಜಶ್ರೀ ಗುಂಡಮಿ, ಕವಿತಾ ಬೆಟಗೇರಿ, ಮಂಜುಳಾ ದಾಸರ, ಮಂಜುಳಾ ಮೇಟಿ, ಪ್ರೀತಿ ಬಡಿಗೇರ, ಇತರರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.