ಹುಬ್ಬಳ್ಳಿ: ಕರೊನಾ ಸೋಂಕು ಎಲ್ಲೆಡೆ ಹರಡಿರುವುದರಿಂದ ಈ ಬಾರಿ ಶಬರಿಮಲೈ ಯಾತ್ರೆ ಅಷ್ಟೊಂದು ಸುಲಭವಲ್ಲ. ಹಾಗಾಗಿಯೇ ಬಹಳಷ್ಟು ಭಕ್ತರು, ಗುರುಸ್ವಾಮಿಗಳು ಇಲ್ಲಿನ ಶಿರೂರ ಪಾರ್ಕ್ ತದ್ರೂಪಿ ಶ್ರೀ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಬರಲಿದ್ದಾರೆ. ಇರುಮುಡಿ ಹೊತ್ತು ಬರುವ ಭಕ್ತರು ಹತ್ತಲು ಇಲ್ಲಿ 18 ಮೆಟ್ಟಿಲುಗಳಿವೆ. ಅಯ್ಯಪ್ಪ ಸ್ವಾಮಿ ಪಕ್ಕದಲ್ಲಿಯೇ ಗಣೇಶ, ಸುಬ್ರಹ್ಮಣ್ಯ ದೇವರೂ ಇದ್ದಾರೆ. ಸ್ವಾಮಿಗೆ ತುಪ್ಪದಾರತಿ, ಅಭಿಷೇಕ ಮಾಡಿಸಬಹುದು. ಆವರಣದಲ್ಲಿಯೇ ಕರಿಯಮ್ಮ ದೇವಿ ದೇವಸ್ಥಾನ ಇದೆ. ದಿನಂಪ್ರತಿ ಪೂಜಾ ವಿಧಾನಗಳು ವಿಧಿಬದ್ಧವಾಗಿ ನಡೆಯುತ್ತಿವೆ. ಈ ದೇವಸ್ಥಾನ ಪ್ರತಿಷ್ಠಾಪನೆಯಾಗಿ ಆರು ವರ್ಷಗಳು ಕಳೆದಿವೆ.
ಕರೊನಾ ಇರುವುದರಿಂದ ಕೇರಳ ಸರ್ಕಾರ ಅಯ್ಯಪ್ಪನ ದರ್ಶನಕ್ಕೆ ಹಲವು ನಿರ್ಬಂಧ ಹೇರಿದೆ. ಅಲ್ಲಿಗೆ ಹೋಗಲಾಗದೆ ಈ ದೇವಸ್ಥಾನಕ್ಕೆ ಇರುಮುಡಿ ಹೊತ್ತು ಬರುವ ಭಕ್ತರಿಗಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ ಉಳಿದುಕೊಳ್ಳುವುದಕ್ಕಿಂತ ಬೆಳಗ್ಗೆ ಬಂದು ರಾತ್ರಿ ಹೊರಡುವಂತೆ ಭಕ್ತರು, ಗುರುಸ್ವಾಮಿಗಳು ವ್ಯವಸ್ಥೆ ಮಾಡಿಕೊಳ್ಳಬೇಕು. | ಡಾ.ವಿ.ಎಸ್.ವಿ.ಪ್ರಸಾದ ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಉಪಾಧ್ಯಕ್ಷ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಲಾಗಿದೆ. ಶಬರಿಮಲೈ ಮಾದರಿಯ ದೇವಸ್ಥಾನವೇ ಇಲ್ಲಿದೆ. ಇಲ್ಲಿಗೆ ಬಂದು ಸಾಕ್ಷಾತ್ ಅಯ್ಯಪ್ಪಸ್ವಾಮಿಯ ದರ್ಶನ ಪಡೆಯಬಹುದು. ಡಾ.ವಿಜಯ ಸಂಕೇಶ್ವರ ಅವರ ಕುಟುಂಬ ಇಂಥ ಅತ್ಯದ್ಭುತವಾದ ದೇವಸ್ಥಾನ ನಿರ್ವಿುಸಿರುವುದು ನಮ್ಮೆಲ್ಲರ ಭಾಗ್ಯ. | ಆನಂದ ಗುರುಸ್ವಾಮಿ, ಧರ್ಮದರ್ಶಿ
ಶಬರಿಮಲೈ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಈ ಬಾರಿ ತೆರಳುವುದು ಕಷ್ಟ ಸಾಧ್ಯ. ಆದ್ದರಿಂದ, 18 ಪವಿತ್ರ ಮೆಟ್ಟಿಲುಗಳಿರುವ ದೇವಸ್ಥಾನದಲ್ಲಿಯೇ ಪೂಜೆ ಸಲ್ಲಿಸಿ, ಸ್ವಾಮಿಗೆ ಅಭಿಷೇಕ ಮಾಡಿ ತುಪ್ಪದ ದೀಪ ಹಚ್ಚುವುದು ಸೂಕ್ತ ಎಂದು ಇತ್ತೀಚೆಗೆ ಇದೇ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಚಿಂತನ-ಮಂಥನ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ವಿವಿಧ ಭಾಗಗಳ ಗುರುಸ್ವಾಮಿಗಳು ಅಭಿಪ್ರಾಯ ಮಂಡಿಸಿದ್ದಾರೆ. ಹಾಗಾಗಿ ಹುಬ್ಬಳ್ಳಿಗೆ ರಾಜ್ಯದ ವಿವಿಧ ಭಾಗಗಳಿಂದ ಇರುಮುಡಿ ಹೊತ್ತು ಮಾಲಾಧಾರಿಗಳು ಬರಲಿದ್ದಾರೆ. ಸುಮಾರು 40ರಿಂದ 50 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಇಲ್ಲಿ ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್, ಸೇವಾ ಸಮಿತಿಗಳಿವೆ. ಗುರುಸ್ವಾಮಿಯೂ ಇದ್ದಾರೆ. ಆಗಮಿಸುವ ಮಾಲಾಧಾರಿಗಳು, ಗುರುಸ್ವಾಮಿಗಳ ಸೇವೆಗೆ ಸಮಿತಿಯ ತಂಡ ಸಿದ್ಧವಾಗಿದೆ. ಪೂಜಾ ವಿಧಿ ವಿಧಾನ ನೆರವೇರಿಸಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಶಬರಿಮಲೈಗೆ ತೆರಳಲಾಗದ ಸುಮಾರು 4 ಸಾವಿರಕ್ಕೂ ಅಧಿಕ ಭಕ್ತರು ಕಳೆದ ವರ್ಷ ಇಲ್ಲಿಗೆ ಆಗಮಿಸಿದ್ದರು. ಇಲ್ಲಿನ ಅತ್ಯುತ್ತಮ ವ್ಯವಸ್ಥೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿ, ಪ್ರತಿ ವರ್ಷ ಇಲ್ಲಿಗೆ ಬರಲು ತೀರ್ವನಿಸಿದ್ದಾರೆ.