ಅಯೋಧ್ಯೆ ರೈಲು ನಿಲ್ದಾಣದಲ್ಲಿ ಆರ್ಟ್‌ವಾಲೆ ಕಲಾಕೃತಿ

ayodya
Published on

ಹುಬ್ಬಳ್ಳಿ: ಅಯೋಧ್ಯೆಯ ರೈಲು ನಿಲ್ದಾಣದಲ್ಲಿ ಹುಬ್ಬಳ್ಳಿಯ ಆರ್ಟ್‌ವಾಲೆ ಅವರಿಂದ ಒಟ್ಟು 4 ಕಲಾಕೃತಿಗಳನ್ನು ನಿರ್ಮಿಸಲಾಗಿದೆ ಎಂದು ಆರ್ಟ್‌ವಾಲೆ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಗೌತಮ ಓಸ್ತವಾಲ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
15 ಅಡಿ ಎತ್ತರದ ಅಳಿಲು ಕಲಾಕೃತಿ, 20 ಅಡಿ ಎತ್ತರದ ಅಯೋಧ್ಯೆ ನಗರದ ಕಲಾಕೃತಿ, 46 ಅಡಿ ಎತ್ತರದ ರಾಮಮಂದಿರದ ಕಲಾಕೃತಿ ಹಾಗೂ 46 ಅಡಿ ಎತ್ತರದ ಸರಯೂ ಘಾಟ್ ಕಲಾಕೃತಿ ನಿರ್ಮಿಸಲಾಗಿದೆ ಎಂದರು.
ನಮಗೆ ಕಡಿಮೆ ಅವಧಿ ಇದ್ದುದರಿಂದ ಒಟ್ಟು 20 ಜನ ಕಲಾವಿದರು 35 ದಿನಗಳಲ್ಲಿ ಹಗಲು-ರಾತ್ರಿ ಕಾರ್ಯ ನಿರ್ವಹಿಸಿ ಕೆಲಸವನ್ನು ಬೇಗ ಪೂರ್ಣಗೊಳಿಸಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಆರ್ಟ್ ನಿರ್ದೇಶಕಿ ನಿಧಿ ಓಸ್ತವಾಲ, ದೀಪಕ ಗಿರಿಯಾಪುರ, ಗುರುಮೂರ್ತಿ ಭಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net