ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆಗೆ ಕೇಂದ್ರ ಅಸ್ತು

Hubballi ankola railway
Published on

ಕಾರವಾರ : ಹುಬ್ಬಳ್ಳಿ-ಅಂಕೋಲಾ 163 ಕಿಮೀ ದ್ವಿಪಥ ರೈಲ್ವೆ ಮಾರ್ಗ ಮಂಜೂರಿಯಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಶುಕ್ರವಾರ ಉತ್ತರ ನೀಡಿದ್ದಾರೆ. ಭಾರತೀಯ ರೈಲ್ವೆ ಇಲಾಖೆಯು ಕರ್ನಾಟಕದಲ್ಲಿ ರೈಲ್ವೆ ಸಂಪರ್ಕ ಹೆಚ್ಚಿಸಲು 42,517 ಕೋಟಿ ರೂ.ವೆಚ್ಚದ 3,264 ಕಿಮೀ ಉದ್ದದ 25 ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ವೈಷ್ಣವ್ ಹೇಳಿದ್ದಾರೆ. ಅದರಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯೂ ಸೇರಿದೆ ಎಂದು ಪಿಐಬಿ ವರದಿ ಮಾಡಿದೆ. ಕರಾವಳಿ ಹಾಗೂ ಬಯಲುಸೀಮೆಯನ್ನು ಬೆಸೆಯುವ, ರಾಜ್ಯದ ವಾಣಿಜ್ಯ ಚಟುವಟಿಕೆಗಳಿಗೆ ಭಾರಿ ಬೂಸ್ಟ್ ನೀಡಬಹುದಾದ ಯೋಜನೆ ಇದಾಗಿದೆ. ಬಹು ದಿನಗಳಿಂದ ನೆನೆಗುದಿಗೆ ಬಿದ್ದ ರೈಲ್ವೆ ಯೋಜನೆ ಜಾರಿಯಾಗುವ ನಿರೀಕ್ಷೆಯನ್ನು ವೈಷ್ಣವ್ ಹೇಳಿಕೆ ಹೆಚ್ಚಿಸಿದೆ. ಆದರೆ, ಇನ್ನೂ ಸಾಕಷ್ಟು ತಾಂತ್ರಿಕ ಪ್ರಕ್ರಿಯೆಗಳು ಪಾಕಿ ಇರುವುದರಿಂದ ಯೋಜನೆ ಭೌತಿಕವಾಗಿ ಕಾರ್ಯಗತಗೊಳ್ಳಲು ಇನ್ನಷ್ಟು ಕಾಲ ಹಿಡಿಯುವ ಸಾಧ್ಯತೆ ಇದೆ. 17,141 ಕೋಟಿ ಡಿಪಿಆರ್: ಸುಪ್ರೀಂ ಕೋರ್ಟ್ ಸೂಚನೆಯಂತೆ ಅರಣ್ಯ ಮಂತ್ರಾಲಯ, ವನ್ಯಜೀವಿ ಮಂಡಳಿಯ ಸಲಹೆ ಪಡೆದ ನೈರುತ್ಯ ರೈಲ್ವೆ ವಿಭಾಗವು ಯೋಜಿತ ಹುಬ್ಬಳ್ಳಿ-ಅಂಕೋಲಾ ಮಾರ್ಗದ ನಡುವೆ ಇಂಜಿನಿಯರಿಂಗ್ ಹಾಗೂ ಜೀವ ವೈವಿಧ್ಯತೆಯ ಸಮೀಕ್ಷೆಗಳನ್ನು 2024 ರಲ್ಲಿ ನಡೆಸಿತ್ತು. ಫೆ.17 ರಂದು ಭಾರತೀಯ ರೈಲ್ವೆ ಮಂಡಳಿಗೆ ಮರು ವಿಸ್ತçತ ಯೋಜನಾ ವರದಿ(ಡಿಪಿಆರ್)ನ್ನು ಸಲ್ಲಿಸಿತ್ತು. ಒಟ್ಟು 17,141 ಕೋಟಿ ರೂ.ಗಳ ಡಿಪಿಆರ್ ಇದಾಗಿದೆ. 585 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಭೂ ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. 184 ಹೆಕ್ಟೇರ್ ನೀರಾವರಿ ಭೂಮಿ, 185 ಹೆಕ್ಟೇರ್ ಒಣ ಭೂಮಿ ಹಾಗೂ 1.40 ಹೆಕ್ಟೇರ್ ಪಟ್ಟಣ ಪ್ರದೇಶವನ್ನು ಒಳಗೊಂಡಿದೆ ಎಂದು ಡಿಪಿಆರ್‌ನಲ್ಲಿ ವಿವರಿಸಲಾಗಿದೆ. ಇದರಲ್ಲಿ 57 ಸುರಂಗಗಳನ್ನು ಹಾಗೂ 13.89 ಕಿಮೀಗಳಷ್ಟು ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಡಿಪಿಆರ್‌ನಲ್ಲಿ ವಿವರಿಸಲಾಗಿದೆ.

............ಸಂಸದ, ಉತ್ತರ ಕನ್ನಡವಿಶ್ವೇಶ್ವರ ಹೆಗಡೆ ಕಾಗೇರಿಹುಬ್ಬಳ್ಳಿ-ಅಂಕೋಲಾ ಬಹು ನಿರೀಕ್ಷಿತ ಯೋಜನೆಗೆ ಡಿಪಿಆರ್ ಸಲ್ಲಿಕೆಯಾಗಿತ್ತು. ಅದು ಅಗತ್ಯವಾಗಿ ಆಗಲೇಬೇಕಾದ ಯೋಜನೆಯಾಗಿದ್ದು, ಯೋಜನೆ ಕಾರ್ಯಗತ ಮಾಡಲು ಬೇಕಾದ ಎಲ್ಲ ಕಾರ್ಯಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ. ಯೋಜನೆಯ ನೋಟ 1999 ನೇ ಇಸವಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ. 2006 ರ ವರೆಗೆ ಹುಬ್ಬಳ್ಳಿಯಿಂದ ಕಲಘಟಗಿಯವರೆಗೆ ರೈಲ್ವೆ ಹಳಿಗಳನ್ನು ಅಳವಡಿಕೆ. ಯೋಜನೆಗೆ ನೂರಾರು ಹೆಕ್ಟೇರ್ ಅರಣ್ಯನಾಶವಾಗಲಿದೆ. ಆನೆ ಕಾರಿಡಾರ್ ಪ್ರದೇಶದಲ್ಲಿ ಹಳಿ ಹಾದು ಹೋಗಲಿದೆ ಎಂಬ ಕಾರಣ ನೀಡಿ ಪರಿಸರವಾದಿಗಳು ಕೋರ್ಟ್ ಮೊರೆ. ಕಾಮಗಾರಿ ಅಲ್ಲಿಗೇ ಸ್ಥಗಿತ ಯೋಜನೆ ಜಾರಿ ಸುಮಾರು 20 ವರ್ಷ ವಿಳಂಬ ಹಲವು ಸಮಿತಿಗಳ, ತಜ್ಞರು ಅಧ್ಯಯನ ವರದಿ ಪಡೆದು, ವಾದ, ವಿವಾದ ಆಲಿಸಿ ಯೋಜನೆಗೆ ಸುಪ್ರೀಂ ಒಪ್ಪಿಗೆ ಹೊಸ ಡಿಪಿಆರ್ ಮಾಡಲು ಸೂಚನೆ ಹೊಸ ಡಿಪಿಆರ್‌ನಲ್ಲಿ ಅರಣ್ಯ ನಾಶದ ಪ್ರಮಾಣವನ್ನು 750 ಹೆಕ್ಟೇರ್‌ನಿಂದ 585 ಹೆಕ್ಟೇರ್‌ಗೆ ಇಳಿಸಲಾಗಿದೆ. ಯೋಜನಾ ವೆಚ್ಚವು ಹೊಸ ಡಿಪಿಆರ್‌ನಂತೆ 1 ಸಾವಿರ ಕೋಟಿಯಿಂದ 17 ಸಾವಿರ ಕೋಟಿ ರೂ.ಗೆ ಹೆಚ್ಚಳ ...............

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net