ವಿಮಾನ ನಿಲ್ದಾಣಗಳಿಗೆ 23ರೊಳಗೆ ಸಾಧಕರ ಹೆಸರಿಡಿ

19-HBL AIRPORT
Published on

ಹುಬ್ಬಳ್ಳಿ: ಕೇಂದ್ರ ಸರ್ಕಾರ ಅ. 23ರೊಳಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮ, ವಿಜಯಪುರ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ, ಶಿವಮೊಗ್ಗ ನಿಲ್ದಾಣಕ್ಕೆ ಕವಿ ಕುವೆಂಪು ಹೆಸರು ನಾಮಕರಣ ಮಾಡಬೇಕು ಎಂದು ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬ್ರಿಟಿಷರ ವಿರುದ್ಧ ದಂಗೆ ಎದ್ದು 1824ರಲ್ಲಿ ಬ್ರಿಟಿಷ್ ಸೈನ್ಯದ ಸೈನ್ಯಾಧಿಕಾರಿ ಥ್ಯಾಕರೆಯನ್ನು ಕೊಂದು ಅವರ ಸೈನ್ಯ ಹಿಮ್ಮೆಟ್ಟಿಸಿ ಕಿತ್ತೂರು ಧ್ವಜ ಹಾರಿಸಿದ ವಿಜಯೋತ್ಸವಕ್ಕೀಗ 200 ವರ್ಷ ತುಂಬಿದೆ. ನಾಲ್ಕೂ ವಿಮಾನ ನಿಲ್ದಾಣಗಳ ಎದುರು ಆಯಾ ಮಹಾನ್ ನಾಯಕರ 111 ಅಡಿ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಬೇಗ ನಿರ್ಣಯ ಕೈಗೊಳ್ಳದಿದ್ದರೆ ನವೆಂಬರ್​ನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು, ಸಾದು-ಸಂತರ ನೇತೃತ್ವದಲ್ಲಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net