

ಹಾವೇರಿ: ಹಿರಿಯ ಪತ್ರಕರ್ತ ಪ್ರಕಾಶ ಜೋಶಿ ನಿಧನದ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಪತ್ರಕರ್ತರಾದ ಮಹಾಂತೇಶ ಅಂಗೂರ, ಬಸವರಾಜ ಮರಳಿಹಳ್ಳಿ, ಜೋಶಿ ಅವರೊಂದಿನ ಒಡನಾಟ ಮತ್ತು ಅವರ ಸಾಧನೆ ಕುರಿತು ಮಾತನಾಡಿದರು.
ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರವತ್ತೇರ, ಪತ್ರಕರ್ತರಾದ ನಾರಾಯಣ ಹೆಗಡೆ, ಕೇಶವಮೂರ್ತಿ ವಿ.ಬಿ., ಕಿರಣ ಮಾಸಣಗಿ, ವೀರೇಶ ಮಡ್ಲೂರ, ಪ್ರಶಾಂತ ಮರೆಮ್ಮನವರ, ವೀರೇಶ ಬಾರ್ಕಿ, ವಿನಾಯಕ ಹುದ್ದಾರ, ಮಂಜುನಾಥ ಗುಡಿಸಾಗರ, ಮಂಜುನಾಥ ದಾಸಣ್ಣನವರ, ನಿಂಗಪ್ಪ ಆರೇರ, ಮದರಸಾಬ ಮಂಜಲಾಪುರ, ಫಕ್ಕೀರಸ್ವಾಮಿ ಮಟ್ಟೆಣ್ಣನವರ, ರಾಜೇಂದ್ರ ರಿತ್ತಿ, ಇತರರಿದ್ದರು.