

ತಾಳಿಕೋಟೆ : ತಾಲೂಕಿನ ಚೋಕ್ಕಾವಿ ಗ್ರಾಮದ ಪುರಾತನ ಬಾವಿಯನ್ನು ಗ್ರಾಮದ ಸಚಿನ್ ಗೆಳೆಯರ ಬಳಗದವರು ಸ್ವಚ್ಛಗೊಳಿಸಿ ಗ್ರಾಮಸ್ಥರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೂರಾರು ವರ್ಷಗಳ ಹಳೆಯ ಬಾವಿಯು ಸ್ವಚ್ಛತೆ ಕಂಡಿರಲಿಲ್ಲ. ತ್ಯಾಜ್ಯದಿಂದ ನೀರು ಕಲುಷಿತಗೊಂಡಿತ್ತು. ಗ್ರಾಮದೇವತೆ ಜಾತ್ರೆಯಲ್ಲಿ ಗಂಗಸ್ಥಳ ಅಲ್ಲದೇ, ಮೊಹರಂ ಹಬ್ಬದ ದೇವರ ದಫನ್ ಕಾರ್ಯವೂ ಇದೇ ಬಾವಿಯಲ್ಲಿ ನಡೆಯುತ್ತದೆ. ಹೀಗಾಗಿ ಯುವಕರ ಪಡೆಯು ಬಾವಿಯನ್ನು ಸ್ವಚ್ಛಗೊಳಿಸಿದ್ದಾರೆ.
ಗೆಳೆಯರ ಬಳಗದ ಪ್ರವಿಣ, ಆಕಾಶ, ನಾಗರಾಜ, ಸುರೇಶ, ಅಭಿ, ಪ್ರಶಾಂತ, ಸಚಿನ, ಸುರೇಶ, ಅನಿಲ, ವಿರೇಶ, ಪ್ರಶಾಂತ, ದೇವಣ್ಣ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.