

ಬಸವನಬಾಗೇವಾಡಿ: ಆರೋಗ್ಯಪೂರ್ಣ ಜೀವನ ಸಾಗಿಸಬೇಕಾದರೆ ಯೋಗ ಅಳವಡಿಸಿಕೊಳ್ಳಬೇಕು ಎಂದು ವಿವೇಕ ಬ್ರಿಗೇಡ್ ಮುಖ್ಯಸ್ಥ ರವಿಗೌಡ ಚಿಕ್ಕೊಂಡ ಹೇಳಿದರು
ಪಟ್ಟಣದ ವಿದ್ಯಾನಗರ ಉದ್ಯಾನವನದಲ್ಲಿ ಪತಂಜಲಿ ಯೋಗ ಸಮಿತಿ ಶನಿವಾರ ಹಮ್ಮಿಕೊಂಡಿದ್ದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಉಚಿತ ಯೋಗಭ್ಯಾಸ ಮಾಡಿಸಿ ಸಮುದಾಯದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪತಂಜಲಿ ಯೋಗ ಸಮಿತಿ ಕಾರ್ಯ ಶ್ಲಾನೀಯ. ಸಮಿತಿ ತಾಲೂಕು ಪ್ರಭಾರಿ ಕಾಶಿನಾಥ ಅವಟಿ ಅವರು ತಾಲೂಕಿನಾದ್ಯಂತ ಯೋಗ ಶಿಬಿರಗಳನ್ನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರಿಗೂ ಯೋಗದಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ವಿವೇಕ ಬ್ರಿಗೇಡ್ನ ವಿನೂತ ಕಲ್ಲೂರ ಮಾತನಾಡಿ, ಯಾರು ಯೋಗವನ್ನು ರೂಡಿಸಿಕೊಳ್ಳುತ್ತಾರೋ ಅವರು ರೋಗದಿಂದ ದೂರವಿರುತ್ತಾರೆ ಎಂದರು.
ಆದರ್ಶ ಶಿಕ ಬಳಗದ ಕೊಟ್ರೇಶ್ ಹೆಗಡ್ಯಾಳ ಮಾತನಾಡಿ, ಆರೋಗ್ಯವಂತ ಸಮಾಜಕ್ಕಾಗಿ ಉಚಿತ ಯೋಗ ಶಿಬಿರ ಆಯೋಜಿಸುತ್ತಿರುವ ಸಮಿತಿಯ ಕಾರ್ಯ ಶ್ಲಾನೀಯ ಎಂದರು.
ಕಾಶಿನಾಥ ಅವಟಿ ಅವರು ಯೋಗದ ಕುರಿತು ಮಾಹಿತಿ ನೀಡಿದರು.
ಜ್ಞಾನಭಾರತಿ ಶಿಣ ಸಂಸ್ಥೆಯ ಎನ್.ಎಸ್. ಹೂಗಾರ, ಯೋಗ ಸಮಿತಿಯ ಗೌರವ ಕಾರ್ಯದರ್ಶಿ ಪ್ರಭಾಕರ ಖೇಡದ, ಯೋಗ ಸಾಧಕರಾದ ರುದ್ರಗೌಡ ಹಂಗರಗಿ, ರಮೇಶ ಹಿಟ್ನಳ್ಳಿ , ಸಂದೀಪ ಹೊಳಿ, ಶಿಕಿಯರಾದ ಶಾರದಾ ಹಿಪ್ಪರಗಿ, ಶಿವಾನಂದ ತೋಳನೂರ, ಬಾಲಯೋಗ ಪಟು ಶಿವಾನಿ ಮತ್ತಿತರರು ಇದ್ದರು.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಶಾಲಾ ಕಾಲೇಜು ಹಾಗೂ ಸಂ ಸಂಸ್ಥೆಗಳಲ್ಲಿ ಯೋಗದಿನ ಆಚರಿಸಲಾಯಿತು.